ಒಂದು ಚಮಚ ಮೊಸರು, ಒಂದು ಚಮಚ ಅಕ್ಕಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ಸ್ವಚ್ಛವಾಗಿ ಮುಖ ತೊಳೆದು ಹಚ್ಚಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ರಿಂದ 20 ನಿಮಿಷ ಹಾಗೆ ಬಿಡಿ. ಒಣಗಿದ ನಂತರ 5 ನಿಮಿಷ ಮಸಾಜ್ ಮಾಡಿ, ನೀರಿನಿಂದ ಮುಖ ತೊಳೆಯಿರಿ.
ಮೊಸರು ಒಣ ಚರ್ಮವನ್ನು ನಿವಾರಿಸಿ, ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಅಕ್ಕಿ ಹಿಟ್ಟಲ್ಲಿ ವಿಟಮಿನ್ ಬಿ ಇರುವುದರಿಂದ ಮೊಡವೆ ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಇನ್ನು ಕಪ್ಪಾಗಿರುವ ಕುತ್ತಿಗೆಯನ್ನು ಬೆಳ್ಳಗೆ ಮಾಡಲು ನಿಂಬೆಹಣ್ಣು ಮತ್ತು ಅಲೋವೆರಾ ಜೆಲ್ ಹಾಕಿ ಚೆನ್ನಾಗಿ ಮಿಶ್ರಣ ಮಾಡ ಇದನ್ನು ಕುತ್ತಿಗೆಯ ಬಳಿ ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ಹದ ಬಿಸಿ ನೀರಿನಿಂದ ನಿಮ್ಮ ಕುತ್ತಿಗೆ ಭಾಗವನ್ನು ಒರೆಸಿಕೊಳ್ಳಿ. ಇದರಿಂದ ಕಪ್ಪಾಗಿರುವ ಕುತ್ತಿಗೆ ಭಾಗ ಬೆಳ್ಳಗಾಗುತ್ತದೆ.