ಕಾಫಿ ಎಲ್ಲರಿಗೂ ಅಚ್ಚುಮೆಚ್ಚು. ಕಾಫಿ ಅಂದರೆ ಬಿಸಿಬಿಸಿ ಕುಡಿಯಬೇಕಪ್ಪಾ….. ಇಲ್ಲವಾದರೆ ಕುಡಿಯಲು ಸಾಧ್ಯವಿಲ್ಲ ಅನ್ನೋರೇ ಹೆಚ್ಚು. ಆದ್ರೆ ಇದೀಗ ಸ್ಪೆಷಲ್ಲಾಗಿ ಬೇಸಿಗೆ ಕಾಲಕ್ಕೆ ಕೋಲ್ಡ್ ಕಾಫಿ ಟೇಸ್ಟ್ ಮಾಡಿ.
ಈ ಹಾಟ್ ಹಾಟ್ ಸಮ್ಮರ್ ಗೆ ಬಿಸಿ ಕಾಫಿ ಕುಡಿಯಲಾಗುವುದಿಲ್ಲ ಅನ್ನುವವರು ಕೋಲ್ಡ್ ಕಾಫಿ ಆಯ್ಕೆ ಮಾಡಿಕೊಳ್ಳಬಹುದು. ಇದು ಕೂಡ ಬಿಸಿ ಕಾಫಿ ಅಷ್ಟೇ ರುಚಿ ಮತ್ತು ಪರಿಮಳ ಹೊಂದಿರುತ್ತದೆ.
ಬೇಕಿದ್ದರೆ ಐಸ್ ಕ್ಯೂಬ್ ಗಳನ್ನು ಹಾಕಿಕೊಳ್ಳಬಹುದು. ಈ ಕೋಲ್ಡ್ ಕಾಫಿ ಕುಡಿಯುವುದರಿಂದ ಕೂಲ್ ಅನುಭವ ಸಿಗುವುದರ ಜೊತೆಗೆ ಕಾಫಿ ಕುಡಿದ ಉಲ್ಲಾಸವೂ ಇರುತ್ತದೆ.
ಕೋಲ್ಡ್ ಕಾಫಿ ಕುಡಿಯುವುದರಿಂದ ಆರೋಗ್ಯ ಪ್ರಯೋಜನಗಳಿವೆ ಎಂದು ಕೆಲವು ಸಂಶೋಧನೆಗಳಿಂದ ತಿಳಿದುಬಂದಿದೆ. ಗ್ಯಾಸ್ಟಿಕ್ ಸಮಸ್ಯೆ ಇದ್ದವರು ಈ ಕಾಫಿ ಕುಡಿಯುವುದು ಉತ್ತಮ.
ಕೋಲ್ಡ್ ಕಾಫಿಯನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದು
ಬ್ಲೆಂಡರ್ ಜಾರ್ ಗೆ ಐಸ್ ಕ್ಯೂಬ್, ಕಾಫಿ ಡಿಕಾಕ್ಷನ್, ಹಾಲು, ಜೇನುತುಪ್ಪ, ಕ್ರೀಂ ಮತ್ತು 2 ಟೇಬಲ್ ಸ್ಪೂನ್ ಐಸ್ ಕ್ರೀಮ್ ಹಾಕಿ ಬ್ಲೆಂಡ್ ಮಾಡಿ. ಇದನ್ನು ಗ್ಲಾಸ್ ಗೆ ಸುರಿದು ಒಂದೆರಡು ಐಸ್ ಕ್ಯೂಬ್ಸ್, ಒಂದು ಸ್ಕೂಪ್ ವೆನಿಲ್ಲಾ ಐಸ್ ಕ್ರೀಂ, ಚಾಕಲೇಟ್ ಸಿರಪ್ ಮತ್ತು ಡ್ರೈ ಫ್ರೂಟ್ಸ್ ತುಣುಕುಗಳನ್ನು ಉದುರಿಸಿ ಕೋಲ್ಡ್ ಕಾಫಿ ಸಿಪ್ ಮಾಡಿ.