ಮಧ್ಯಪ್ರದೇಶದ ಭೋಪಾಲ್ನಲ್ಲಿ ವಿಲಕ್ಷಣ ಮತ್ತು ಹಾಸ್ಯಾಸ್ಪದ ಘಟನೆಯೊಂದು ನಡೆದಿದೆ. ಸಮೋಸಾ ಅಂಗಡಿಯಲ್ಲಿ ಚಮಚ ಮತ್ತು ಬೌಲ್ ಲಭ್ಯವಿಲ್ಲ ಎಂಬ ಕಾರಣಕ್ಕೆ ಹತಾಶನಾದ ವ್ಯಕ್ತಿಯೊಬ್ಬ ಮಧ್ಯಪ್ರದೇಶ ಮುಖ್ಯಮಂತ್ರಿಗಳ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಾನೆ.
ವಂಶ್ ಬಹದ್ದೂರ್ ಎಂಬಾತ ರಾಕೇಶ್ ಸಮೋಸಾ ಶಾಪ್ನಲ್ಲಿ ಸ್ನಾಕ್ಸ್ ತಿನ್ನಲು ತೆರಳಿದ್ದ. ಸಮೋಸಾ ಸರ್ವ್ ಮಾಡಿದ ಅಂಡಿಯಾತ ಬೌಲ್ ಹಾಗೂ ಚಮಚ ಕೊಡಲು ಒಲ್ಲೆ ಎಂದಿದ್ದಾನೆ.
ಇದರಿಂದ ವಂಶ್ ಬಹದ್ದೂರ್ಗೆ ಕೋಪ ನೆತ್ತಿಗೇರಿತ್ತು. ಅಂಗಡಿಯಾತನ ವಿರುದ್ಧ ದೂರು ದಾಖಲಿಸಲೇಬೇಕೆಂದು ನಿರ್ಧರಿಸಿದ ಆತ ಅದಕ್ಕಾಗಿ ಸಿಎಂ ಸಹಾಯವಾಣಿಗೆ ಕರೆ ಮಾಡಿದ್ದಾನೆ.
“ಛತ್ತರ್ಪುರ ಬಸ್ ನಿಲ್ದಾಣದ ಬಳಿ ರಾಕೇಶ್ ಸಮೋಸಾ ಎಂಬ ಅಂಗಡಿ ಇದೆ. ಇಲ್ಲಿ ಸಮೋಸಾ ಪ್ಯಾಕ್ ಮಾಡುವವರು ಚಮಚ, ಬೌಲ್ ನೀಡಿಲ್ಲ. ದಯವಿಟ್ಟು ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸಿ” ಅಂತಾ ಕರೆ ಮಾಡಿ ಹೇಳಿದ್ದಾನೆ. ಆರಂಭದಲ್ಲಿ ಸಹಾಯವಾಣಿಯಲ್ಲಿ ದೂರನ್ನು ಸ್ವೀಕರಿಸಲಾಗಿತ್ತು. ಆದ್ರೆ ಕ್ಷುಲ್ಲಕ ವಿಚಾರವಾಗಿದ್ದರಿಂದ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.