ಕೆಲವರಿಗೆ ಕೆಲವು ಆಹಾರ ಪದಾರ್ಥಗಳ ಸೇವನೆಯಾಗಲೀ, ಅದರ ವಾಸನೆಯಾಗಲೀ ಸಹಿಸಲು ಆಗುವುದಿಲ್ಲ. ಅದರಲ್ಲೂ ವಿಶೇಷವಾಗಿ ಸಮುದ್ರ ಆಹಾರವೆಂದು ಕರೆಸಿಕೊಳ್ಳುವ ಮೀನು, ಸೀಗಡಿ, ಕರಿಮೀನು ಸೇವನೆ ಅಥವಾ ಅದರ ವಾಸನೆ ಕೆಲವರಿಗೆ ವಾಕರಿಕೆ ತರಿಸುತ್ತದೆ.
ಇಂತಹ ಸಮುದ್ರಾಹಾರಕ್ಕೆ ಒಗ್ಗಿಕೊಳ್ಳದವರು ಅದರ ವಾಸನೆಯಿಂದ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗುವುದರಿಂದ ಇದರಿಂದ ತಪ್ಪಿಸಲು ಹೆಚ್ಚು ಬಯಸುತ್ತಾರೆ. ಅಲ್ಲದೇ ಕೆಲವರು ಇಷ್ಟವಾಗದ ನಿರ್ದಿಷ್ಟ ಊಟವನ್ನು ಸೇವಿಸಿದ ನಂತರ ಅನಾರೋಗ್ಯ ಹೊಂದಿರುವುದನ್ನೂ ಕೆಲವರು ಪ್ರದರ್ಶಿಸುತ್ತಾರೆ
ಅಲರ್ಜಿಗಳು ಮತ್ತು ಸೋಂಕುಗಳಿಗೆ ಮಾನವನ ಪ್ರತಿಕ್ರಿಯಾತ್ಮಕತೆಯಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿಜ್ಞಾನಿಗಳು ಬಹಳ ಹಿಂದಿನಿಂದಲೂ ಕಂಡುಕೊಂಡಿದ್ದಾರೆ.
ಆದರೆ ಅಲರ್ಜಿಯ ಪ್ರಚೋದಕಗಳ ಕಡೆಗೆ ಈ ರೀತಿಯ ನಡವಳಿಕೆಗಳನ್ನು ಪ್ರೇರೇಪಿಸುವಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ಪಾತ್ರವನ್ನು ಹೊಂದಿದೆಯೇ ಎಂಬುದು ತಿಳಿದಿಲ್ಲ.
ನೇಚರ್ ಜರ್ನಲ್‌ನಲ್ಲಿ ಜುಲೈ 12 ರಂದು ಪ್ರಕಟವಾದ ಯೇಲ್ ವಿಶ್ವವಿದ್ಯಾನಿಲಯ ನೇತೃತ್ವದ ಸಂಶೋಧನೆಯ ಪ್ರಕಾರ, ನಮ್ಮ ನಡವಳಿಕೆಯನ್ನು ಬದಲಾಯಿಸುವಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದೆ.
ಅಧ್ಯಯನದ ಪ್ರಕಾರ ಪ್ರತಿರಕ್ಷಣಾ ವ್ಯವಸ್ಥೆಯ ಸಂವಹನವಿಲ್ಲದೆ ಮೆದುಳು ಸಂಭವನೀಯ ಅಪಾಯಗಳ ಬಗ್ಗೆ ದೇಹವನ್ನು ಎಚ್ಚರಿಸುವುದಿಲ್ಲ ಮತ್ತು ಅದನ್ನು ತಪ್ಪಿಸಲು ಪ್ರಯತ್ನಿಸುವುದಿಲ್ಲ ಎಂದು ತಿಳಿದುಬಂದಿದೆ.
ಪ್ರತಿರಕ್ಷಣಾ ವ್ಯವಸ್ಥೆ ದೇಹದ ನಡವಳಿಕೆಯನ್ನು ನಿಯಂತ್ರಿಸುತ್ತದೆ. ನಿರ್ದಿಷ್ಟವಾಗಿ ಸಂವಹನ ಮಾಡುವ ಜೀವಾಣುಗಳ ವಿರುದ್ಧ ರಕ್ಷಣಾತ್ಮಕ ನಡವಳಿಕೆಗಳನ್ನು ಮೊದಲು ಪ್ರತಿಕಾಯಗಳ ಮೂಲಕ ನಂತರ ನಮ್ಮ ಮಿದುಳಿಗೆ ಸಂವಹನ ಮಾಡುವುದನ್ನು ನಾವು ಕಂಡುಕೊಂಡಿದ್ದೇವೆ ಎಂದು ಯೇಲ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಇಮ್ಯುನೊಬಯಾಲಜಿಯ ಸ್ಟರ್ಲಿಂಗ್ ಪ್ರೊಫೆಸರ್ ರುಸ್ಲಾನ್ ಮೆಡ್ಜಿಟೋವ್ ಹೇಳಿದರು.