ಸಾಗರದಲ್ಲಿ ಏಳುವ ದೈತ್ಯ ಅಲೆಗಳನ್ನ ನೋಡ್ತಿದ್ರೆನೇ ಗುಂಡಿಗೆ ಗಡಗಡನೆ ನಡಗುತ್ತೆ. ಆದರೂ ಇಲ್ಲಿ ಒಬ್ಬಳು ಗಟ್ಟಿಗಿತ್ತಿ ಸಾಗರದ ನೀರ ಮಧ್ಯೆಯೇ ಮಗುವಿಗೆ ಜನ್ಮ ನೀಡಿದ್ದಾಳೆ.
ಪ್ರತಿಯೊಂದು ಹೆಣ್ಣಿಗೂ ಜೀವನದಲ್ಲಿ ತಾಯಿಯಾಗುವ ಘಳಿಗೆ ಮಹತ್ತರ ಘಟ್ಟ. ಆ ಒಂದು ಕ್ಷಣವನ್ನ ಅದ್ಭುತವನ್ನಾಗಿಸಿದ್ದಾರೆ. 37ವರ್ಷದ ಜೋಸಿ ಪ್ಯೂಕರ್ಟ್, ಅವರ ಕನಸು ಸಮುದ್ರದ ಅಲೆಗಳ ಮಧ್ಯದಲ್ಲಿ ಮಗುವಿಗೆ ಜನ್ಮ ನೀಡುವುದು. ತಮ್ಮ ಈ ಆಸೆಯನ್ನ ತಮ್ಮ ಜೊತೆಗಾರ ನಿಕರಾಗುವಾ ಪ್ಲಾಯಾ ಮಜಗುಯಲ್ ಅವರ ಬಳಿ ಹೇಳಿಕೊಂಡಿದ್ದಾರೆ. ಅವರು ಕೂಡಾ ತಮ್ಮ ಸಂಗಾತಿಯ ಕನಸು ಈಡೇರಿಸುವುದಕ್ಕೆ ಸಹಾಯ ಮಾಡಿದ್ದಾರೆ.
ಸಾಮಾನ್ಯವಾಗಿ ಪ್ರಸವದ ನೋವು ಬಂದಾಗ ಜೀವ ಹೋಗುವಷ್ಟು ನೋವು ಅನುಭವಿಸಬೇಕಾಗುತ್ತೆ. ಆದರೆ ಜೋಸಿ ಪ್ಯೂಕರ್ಟ್ ಅವರಿಗೆ ಆಗಾಗ ಅಲೆಗಳು ಬಂದು ನಿಧಾನವಾಗಿ ಹೊಡೆಯುತ್ತಿದ್ದರಿಂದ ಆಕೆಗೆ ಹೆಚ್ಚು ಪ್ರಸವದ ನೋವು ಅನುಭವಾಗಿಲ್ಲ. ಈಗ ಆಕೆ ವೈದ್ಯರ ಸಹಾಯವಿಲ್ಲದೇ, ಯಾವುದೇ ವೈದ್ಯಕೀಯ ಚಿಕಿತ್ಸೆ ಇಲ್ಲದೇ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ – ಮಗು ಇಬ್ಬರೂ ಆರೋಗ್ಯವಂತರಾಗಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ನಿಕರಾಗುವಾ ಪ್ಲಾಯಾ ಈ ವಿಡಿಯೋವನ್ನ ಅಪ್ಲೋಡ್ ಆಡಿದ್ದಾರೆ. ವೈರಲ್ ಆಗಿರೋ ಈ ವಿಡಿಯೋವನ್ನ ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.