ಪ್ರಯಾಗ್ರಾಜ್ನ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಪುತ್ರ ಮಯಾಂಕ್ ಜೋಶಿ ಇಂದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಅಜಂಗಢದ ಗೋಪಾಲಪುರಿ ವಿಧಾನಸೌಧದಲ್ಲಿ ನಡೆದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ನೇತೃತ್ವದ ಸಭೆಯಲ್ಲಿ ಮಯಾಂಕ್ ಜೋಶಿ ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿದ್ದಾರೆ.
ಲಕ್ನೋದಿಂದ ಬಿಜೆಪಿ ಟಿಕೆಟ್ ಪಡೆಯಲು ಮಯಾಂಕ್ ವಿಫಲವಾದ ಬಳಿಕ ಫೆಬ್ರವರಿಯಿಂದ ಸಮಾಜವಾದಿ ಪಕ್ಷಕ್ಕೆ ಮಯಾಂಕ್ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಹರಿದಾಡುತ್ತಿದ್ದವು. ಆದರೆ ಸಂಸದೆ ರೀಟಾ ಬಹುಗುಣ ಈ ವದಂತಿಗಳನ್ನು ತಳ್ಳಿ ಹಾಕಿದ್ದರು. ತನ್ನ ಮಗ ಪಕ್ಷಕ್ಕೆ ತೊರೆಯುತ್ತಾನೆ ಎಂಬ ವದಂತಿಯು ಆಧಾರರಹಿತವಾಗಿದೆ ಎಂದು ಹೇಳಿದ್ದರು.