
ನಟಿ ಸಮಂತಾ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಇತ್ತೀಚೆಗೆ ʼಶಾಕುಂತಲಂʼ ಸಿನಿಮಾ ಪ್ರಮೋಷನ್ ಗಾಗಿ ಫಾರಿನ್ ನಿಂದ ವಾಪಸ್ ಬಂದಿದ್ದಾರೆ. ಸಿನಿಮಾ ಪ್ರಚಾರದಲ್ಲೂ ಇವರು ಭಾಗಿಯಾದರು. ಅವರನ್ನು ಲೈವ್ ಆಗಿ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಅವರ ಸಿನಿಮಾ ಪ್ರಚಾರದ ವೇಳೆ ಎಲ್ಲರ ಗಮನ ಮತ್ತೊಂದು ಕಡೆ ಸೆಳೆದಿದೆ. ಹೌದು, ಅವರು ಕೂತಾಗ, ಮಾತನಾಡುವಾಗ ಜಪಮಾಲೆಯೊಂದು ಎಲ್ಲರ ಗಮನಕ್ಕೆ ಬಂದಿದೆ. ಅವರ ಕೈಲಿದ್ದ ಮಣಿ ಮಾಲೆಯನ್ನು ನೋಡಿದವರಿಗೆ ಸಮಂತ ಆಧ್ಯಾತ್ಮಿಕತೆ ಕಡೆ ವಾಲಿದ್ರಾ ಅನ್ನೋ ಅನುಮಾನ ಶುರುವಾಗಿದೆ. ಯಾಕಂದ್ರೆ ಆ ಜಪಮಾಲೆಯನ್ನು ಅವರೂ ಎಲ್ಲೂ ಬಿಡದೆ ಕೈಯಲ್ಲೇ ಇಟ್ಟುಕೊಂಡಿದ್ದರು.
ಒಂದರ ಮೇಲೊಂದರಂತೆ ಅವರಿಗೆ ಕಹಿ ಘಟನೆಗಳು ಆಗ್ತಲೇ ಇವೆ. ಹೀಗಾಗಿ ದೇವರ ಕಡೆ ಹೆಚ್ಚು ಗಮನ ಹರಿಸಿದ್ದಾರಾ ಅಂತ ಅನುಮಾನ ಶುರುವಾಗಿದೆ. ಇನ್ನು ಈ ನಟಿ ತನ್ನ ಉತ್ತಮ ಆರೋಗ್ಯ, ಶಾಂತಿಗಾಗಿ ಪ್ರತಿ ದಿನ 10,0008 ಶ್ಲೋಕಗಳ ಜಪ ಮಾಡುತ್ತಿದ್ದಾರಂತೆ. ಇನ್ನೂ ಸ್ಯಾಮ್ ಕೆಲವು ವರ್ಷಗಳ ಹಿಂದೆಯೇ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ಇತ್ತೀಚೆಗೆ ಮಂತ್ರಗಳನ್ನು ಪಠಣೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.