ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಥಟ್ಟಂತ ಏನಾದರೂ ಸಿಹಿ ಮಾಡಬೇಕು ಅನಿಸಿದಾಗ ಒಮ್ಮೆ ರುಚಿಕರವಾದ ಈ ಸಬ್ಬಕ್ಕಿ ಕೇಸರಿ ಬಾತ್ ಅನ್ನು ಮಾಡಿ ನೋಡಿ. ತುಂಬಾ ಚೆನ್ನಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು:
ಸಬ್ಬಕ್ಕಿ – 1/2 ಕಪ್. ನೀರು – 1 ½ ಕಪ್, ಸಕ್ಕರೆ – 1/4 ಕಪ್, ತುಪ್ಪ – 2 ಟೀ ಸ್ಪೂನ್, ಏಲಕ್ಕಿ ಪುಡಿ – ಚಿಟಿಕೆ, ಕೇಸರಿ ದಳ – 4 ಎಸಳು, ಕೇಸರಿ ಫುಡ್ ಕಲರ್ – ಚಿಟಿಕೆ, ಗೋಡಂಬಿ – 8.
ಮಾಡುವ ವಿಧಾನ:
3 ಸಲ ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆಯಿರಿ. ನಂತರ ಒಂದು ಪಾತ್ರೆಯಲ್ಲಿ ಬೇಕಾಗುವಷ್ಟು ನೀರು ಹಾಕಿ ಬೇಯಿಸಿಕೊಂಡು ಶೋಧಿಸಿಕೊಳ್ಳಿ. ನಂತರ ಒಂದು ಪ್ಯಾನ್ ಗೆ ತುಪ್ಪ ಹಾಕಿ ಅದಕ್ಕೆ ಗೋಡಂಬಿ ಹಾಕಿ ಕೆಂಪಗಾಗುವವರೆಗೆ ಹುರಿದುಕೊಂಡು ಎತ್ತಿಟ್ಟುಕೊಳ್ಳಿ.
ನಂತರ ಅದೇ ಪ್ಯಾನ್ ಗೆ ತುಪ್ಪ ಹಾಕಿ ಸಬ್ಬಕ್ಕಿ ಹಾಕಿ ಒಂದು ನಿಮಿಷಗಳ ಕಾಲ ಮಿಕ್ಸ್ ಮಾಡಿಕೊಳ್ಳಿ. ಆಮೇಲೆ ಸಕ್ಕರೆ ಸೇರಿಸಿ ಅದು ನೀರಾಗುತ್ತಿದ್ದಂತೆ ಅದಕ್ಕೆ ಫುಡ್ ಕಲರ್, ಕೇಸರಿ ದಳ, ಏಲಕ್ಕಿ ಪುಡಿ ಸೇರಿಸಿ 2 ನಿಮಿಷಗಳ ಕಾಲ ಮಿಕ್ಸ್ ಮಾಡಿ. ನಂತರ ಇದಕ್ಕೆ 1 ಚಮಚ ತುಪ್ಪ ಸೇರಿಸಿ ಮತ್ತೊಮ್ಮೆ ಕೈಯಾಡಿಸುತ್ತಾ ಇರಿ. ಹಾಗೇ ಗೋಡಂಬಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ ಸರ್ವ್ ಮಾಡಿ.