ಈಗ ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಹೊರಗಡೆ ಹೋದಾಗ ಬಿಸಿಲಿನಿಂದ ಚರ್ಮ ಸುಟ್ಟು ಹೋಗಿ ಕಪ್ಪಾಗುತ್ತದೆ. ಇದು ತ್ವಚೆಯ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಈ ಸನ್ ಟ್ಯಾನ್ ನಿವಾರಿಸಿ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಈ ಫೇಸ್ ಪ್ಯಾಕ್ ಗಳನ್ನು ಮನೆಯಲ್ಲಿಯೇ ತಯಾರಿಸಿ ಹಚ್ಚಿ.
*ಅಲೋವೆರಾ, ಮಸೂರ್ ದಾಲ್ ಮತ್ತು ಟೊಮೆಟೊ ಸನ್ ಟ್ಯಾನ್ ತೆಗೆಯಲು ಸಹಕಾರಿಯಾಗಿದೆ. ಹಾಗಾಗಿ ಇವೆಲ್ಲಾ ಪದಾರ್ಥಗಳನ್ನು ಒಂದೊಂದು ಚಮಚದಷ್ಟು ಸಮಪ್ರಮಾಣದಲ್ಲಿ ತೆಗೆದುಕೊಂಡು ನೀರಿನಲ್ಲಿ 20ನಿಮಿಷ ನೆನೆಸಿ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಮತ್ತು ಕುತ್ತಿಗೆಗೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. 20 ನಿಮಿಷ ಬಿಟ್ಟು ನೀರಿನಲ್ಲಿ ವಾಶ್ ಮಾಡಿ.
*ನಿಂಬೆ ರಸ ಕಂದು ಬಣ್ಣವನ್ನು ತೆಗೆದು ಹಾಕುತ್ತದೆ. ಸೌತೆಕಾಯಿ ಮತ್ತು ರೋಸ್ ವಾಟರ್ ಚರ್ಮವನ್ನು ತಂಪಾಗಿಸುತ್ತದೆ. ಹಾಗಾಗಿ ನಿಂಬೆ ರಸ, ಸೌತೆಕಾಯಿ ರಸ, ರೋಸ್ ವಾಟರ್ ಮೂರನ್ನು 1 ಚಮಚದಷ್ಟು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ತಣ್ಣೀರಿನಿಂದ ವಾಶ್ ಮಾಡಿ.