ಜಪಾನ್ ಟೊಯೊಟಾ ಕಂಪನಿ ಭಾರತದಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದರ ಹೆಸರು ಇನ್ನೋವಾ ಹೈಕ್ರಾಸ್, ಟೊಯೊಟಾ ಇನ್ನೋವಾ ಕಾರಿನ ಹೊಸ ರೂಪಾಂತರ. ಈ ಕಾರನ್ನು ನವೆಂಬರ್ 21 ರಂದು ಇಂಡೋನೇಷ್ಯಾದಲ್ಲಿ ಲಾಂಚ್ ಮಾಡಲಾಗ್ತಿದೆ. ನಂತರ ನವೆಂಬರ್ 25ರಂದು ಭಾರತದಲ್ಲಿ ಕಾರು ಬಿಡುಗಡೆಯಾಗಲಿದೆ. ಅಧಿಕೃತ ಬಿಡುಗಡೆಗೆ ಮುನ್ನವೇ ವಾಹನದ ಫೋಟೋ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಇದರಲ್ಲಿ ಕಾರಿನ ಬಾಹ್ಯ ವಿನ್ಯಾಸವನ್ನು ಸ್ಪಷ್ಟವಾಗಿ ಕಾಣಬಹುದು.
ಟೊಯೊಟಾ ಇನ್ನೋವಾ ಹೈಕ್ರಾಸ್, ಟೊಯೊಟಾ ಫಾರ್ಚುನರ್ ಕಾರನ್ನೇ ಹೋಲುತ್ತದೆ. ಈಗಾಗ್ಲೇ ಕಂಪನಿ ಡೀಲರ್‌ಶಿಪ್ ಮಟ್ಟದಲ್ಲಿ ವಾಹನಕ್ಕಾಗಿ ಬುಕ್ಕಿಂಗ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ಹೈಕ್ರಾಸ್ ವಿನ್ಯಾಸ್ ಎಸ್‌ಯುವಿಯಂತಿದೆ. ನಯವಾದ ಎಲ್ಇಡಿ ಹೆಡ್‌ಲೈಟ್‌ಗಳು, ಮಸ್ಕ್ಯುಲರ್ ಫ್ರಂಟ್ ಬಂಪರ್ ಇದರ ವಿಶೇಷತೆ. ಡ್ಯುಯಲ್ ಟೋನ್ ORVM ಜೊತೆಗೆ LED ಟರ್ನ್ ಸಿಗ್ನಲ್ ಅನ್ನು ಅಳವಡಿಸಲಾಗಿದೆ. ಹಿಂಭಾಗದಲ್ಲಿ LED ಟೈಲ್‌ಲ್ಯಾಂಪ್‌ಗಳು, ಹಿಂಭಾಗದ ವಿಂಡ್‌ಶೀಲ್ಡ್ ವೈಪರ್ ಮತ್ತು ಮಧ್ಯದಲ್ಲಿ ಟೊಯೋಟಾ ಲೋಗೋ ಇದೆ. ದೊಡ್ಡ ಸನ್‌ರೂಫ್ ಮತ್ತು ರೂಫ್ ಮೌಂಟೆಡ್ ಎಸಿಇದರ ವಿಶೇಷತೆ.
ಇದು ರೂಫ್-ಮೌಂಟೆಡ್ ಏರ್-ವೆಂಟ್‌ಗಳು ಮತ್ತು ಆಂಬಿಯೆಂಟ್ ಲೈಟಿಂಗ್ ಅನ್ನು ಹೊಂದಿದೆ. ಹಿಂಭಾಗದ ಪ್ರಯಾಣಿಕರಿಗಾಗಿ ಇನ್ನೋವಾ ಹೈಕ್ರಾಸ್ನಲ್ಲಿ ಮಾನಿಟರ್ ಕೂಡ ಇದೆ. ಟೊಯೊಟಾ ಇನ್ನೋವಾ ಹೈಕ್ರಾಸ್, ಕಂಪನಿಯ ಮಾಡ್ಯುಲರ್ TNGA-C ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಟೊಯೊಟಾ ಇನ್ನೂ ಇದರ ತಾಂತ್ರಿಕ ವೈಶಿಷ್ಟ್ಯಗಳನ್ನು ಪ್ರಕಟಿಸಿಲ್ಲ. ಆದಾಗ್ಯೂ MPV ಹೊಸ ಎಂಜಿನ್ ಆಯ್ಕೆಯೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಸಾಮಾನ್ಯ ಪೆಟ್ರೋಲ್ ಪವರ್‌ಟ್ರೇನ್ ಮತ್ತು ಬಲವಾದ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿರುತ್ತದೆ.