alex Certify ಸದ್ಯದಲ್ಲೇ ಭಾರತೀಯ ಸೇನೆಗೂ ಎಲೆಕ್ಟ್ರಿಕ್‌ ವಾಹನಗಳ ಸೇರ್ಪಡೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸದ್ಯದಲ್ಲೇ ಭಾರತೀಯ ಸೇನೆಗೂ ಎಲೆಕ್ಟ್ರಿಕ್‌ ವಾಹನಗಳ ಸೇರ್ಪಡೆ…..!

ಅತ್ಯಂತ ಬಲಶಾಲಿ ಸೇನೆ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತವೂ ಒಂದು. ಭಾರತೀಯ ಸೇನೆಯಲ್ಲಿ 12 ಲಕ್ಷಕ್ಕೂ ಹೆಚ್ಚು ಕೆಚ್ಚೆದೆಯ ಯೋಧರಿದ್ದಾರೆ. ಭಾರತೀಯ ಸೇನೆ ಎಲೆಕ್ಟ್ರಿಕ್‌ ವಾಹನಗಳನ್ನು ಬಳಸಲು ಯೋಜನೆ ಹಾಕಿಕೊಂಡಿದೆ. ಹಲವು ಹಂತಗಳಲ್ಲಿ ಸೀಮಿತ ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳು ಸೇನೆಗೆ ಸೇರ್ಪಡೆಯಾಗಲಿವೆ.

ಭಾರತದಲ್ಲಿ ಮಾಲಿನ್ಯ ತಗ್ಗಿಸಲು ಭಾರತೀಯ ಸೇನೆ ಈ ಕ್ರಮಕ್ಕೆ ಮುಂದಾಗಿದೆ. ಜನರಲ್ ಎಂ.ಎಂ.ನರವಾಣೆ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 18ರಿಂದ 22ರವರೆಗೆ ನಡೆಯಲಿರುವ ಸೇನಾ ಕಮಾಂಡರ್‌ಗಳ ಸಮ್ಮೇಳನದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಕುರಿತು ಚರ್ಚೆ ನಡೆಯಲಿದೆ.  ಚೀನಾವನ್ನು ಸಂಪರ್ಕಿಸುವ 3,488 ಕಿಮೀ ಲೈನ್‌ ಆಫ್‌ ಕಂಟ್ರೋಲ್‌ನಲ್ಲಿ ಈ ವಾಹನಗಳ ಕಾರ್ಯಾಚರಣೆ ಕುರಿತು ಚರ್ಚೆಯಾಗಲಿದೆ.

ಸೇನೆಯು ಈಗಾಗ್ಲೇ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಅಧ್ಯಯನ ಮಾಡಿದೆ. ಪೆಟ್ರೋಲ್ ಮೇಲಿನ ಅವಲಂಬನೆಯನ್ನು ಕೊನೆಗೊಳಿಸಲು, ಪರಿಸರ ಸಂರಕ್ಷಣೆ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸೇನೆ ಈ ಕ್ರಮಕ್ಕೆ ಮುಂದಾಗಿದೆ. ಸೇನಾ ಪ್ರಧಾನ ಕಚೇರಿಯಿಂದ ಶಾಂತಿ ಕೇಂದ್ರಗಳವರೆಗೆ ಎಲೆಕ್ಟ್ರಿಕ್ ವಾಹನಗಳ ಪರೇಡ್‌ ನಡೆಯಲಿದೆ.

ಹವಾಮಾನ ವೈಪರೀತ್ಯದ ಪರಿಸ್ಥಿತಿಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಸರಿಯಾದ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿವೆಯೇ ಎಂಬುದನ್ನು ವಿವರವಾಗಿ ಪರೀಕ್ಷಿಸಲಾಗುತ್ತದೆ.  ಈ ವಾಹನಗಳು ಪೂರ್ತಿಯಾಗಿ ಚಾರ್ಜ್‌ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಜೊತೆಗೆ ಬೇಡಿಕೆಗೆ ತಕ್ಕಷ್ಟು ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನೆಯೂ ಆಗುತ್ತಿಲ್ಲ.

ಹಾಗಾಗಿ ಇದು ಸೇನೆಗೆ ಕೊಂಚ ಸಮಸ್ಯೆ ಆಗಬಹುದು. ಕೆಲವು ನಗರಗಳಲ್ಲಿರುವ ಸೇನಾ ಕಂಟೋನ್ಮೆಂಟ್ ಪ್ರದೇಶದಲ್ಲಿ ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಪ್ರಾರಂಭಿಸಲಾಗಿದೆ. ದೆಹಲಿಯಲ್ಲಿ  ಸುಮಾರು 25 ಪ್ರತಿಶತದಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಸೇನೆ ಚಿಂತನೆ ನಡೆಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...