ಕರೆಂಟ್ ಬಂತಾ..? ಕರೆಂಟ್ ಇದೆಯಾ..? ಇದು ಕಳೆದ ಕೆಲ ದಿನಗಳಿಂದ ಅನೇಕ ಕಡೆ ಕೇಳಿ ಬರುತ್ತಿರುವ ಮಾತಾಗಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಲೋಡ್ ಶೆಡ್ಡಿಂಗ್ ಸದ್ದಿಲ್ಲದೇ ಶುರುವಾಗಿದೆ.
ಸಾಮಾನ್ಯವಾಗಿ ಬೇಸಿಗೆ ಅವಧಿಯಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತದೆ. ಅಧಿಕೃತವಾಗಿ ಲೋಡ್ ಶೆಡ್ಡಿಂಗ್ ಆರಂಭವಾಗುವ ಮೊದಲೇ ಅನಧಿಕೃತವಾಗಿ ಕರೆಂಟ್ ಕಟ್ ಮಾಡಲಾಗುತ್ತದೆ.
ಇದರಿಂದಾಗಿ ಬೆಳಿಗ್ಗೆ ಮತ್ತು ಸಂಜೆ ನಿತ್ಯದ ಕೆಲಸಗಳಿಗೆ ತೊಂದರೆಯಾಗಿದೆ. ಕೆಲಸಕ್ಕೆ ಹೋಗುವವರು, ಶಾಲೆ –ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಕೈಗಾರಿಕೆಗಳು, ಕೃಷಿ ಚಟುವಟಿಕೆಗಳು ಸೇರಿದಂತೆ ಅನೇಕ ಕಾರ್ಯಚಟುವಟಿಕೆಗಳಿಗೆ ಹಿನ್ನಡೆಯಾಗಲಿದೆ.
ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ವ್ಯಕ್ತಿ ಮಾಡಿಕೊಂಡ ʼಫಜೀತಿʼ
ಬೆಳಗಿನ ವೇಳೆ ಕೆಲಸಕ್ಕೆ ತೆರಳುವ ಧಾವಂತದಲ್ಲಿದ್ದವರು ಕರೆಂಟ್ ಗಾಗಿ ಕಾಯುವಂತಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಕರೆಂಟ್ ಈಗಾಗಲೇ ಜೂಟಾಟ ಆರಂಭಿಸಿದೆ. ಹಿಟ್ಟಿನ ಗಿರಣಿ, ನೀರು ಪೂರೈಕೆ ಮತ್ತಿತರ ಕೆಲಸ ಕಾರ್ಯಗಳಿಗೆ ಲೋಡ್ ಶೆಡ್ಡಿಂಗ್ ನಿಂದ ತೊಂದರೆಯಾಗಿದೆ.
ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯುತ್ತಿದೆ ಮತ್ತು ಪಿ.ಯು.ಸಿ. ಪರೀಕ್ಷೆಗಳು ಆರಂಭವಾಗಲಿವೆ. ಮಾತ್ರವಲ್ಲ, ಬಹುತೇಕ ಪರೀಕ್ಷೆಗಳು ಇದೇ ಅವಧಿಯಲ್ಲಿ ನಡೆಯಲಿರುವುದರಿಂದ ವಿದ್ಯಾರ್ಥಿಗಳು ಪರೀಕ್ಷಾ ತಯಾರಿಗೆ ಕರೆಂಟ್ ಕಾಯಬೇಕಾಗುತ್ತದೆ.
ಇದು ಆರಂಭಿಕ ಹಂತವಾಗಿರುವುದರಿಂದ ಅಷ್ಟೇನೂ ತೊಂದರೆ ಕಾಣಿಸಿಲ್ಲ. ಮುಂದಿನ ದಿನಗಳಲ್ಲಿ ಲೋಡ್ ಶೆಡ್ಡಿಂಗ್ ಹೀಗೆಯೇ ಮುಂದುವರೆದಲ್ಲಿ ಜನರಿಗೆ ಸಮಸ್ಯೆ ಎದುರಾಗಲಿದೆ.