ಸದಾ ಸುಖಕರ ಜೀವನ ನಡೆಸಬೇಕೆಂಬುದು ಪ್ರತಿಯೊಬ್ಬನ ಆಸೆ. ಇದಕ್ಕಾಗಿ ಜೀವನ ಪೂರ್ತಿ ಶ್ರಮ ವಹಿಸ್ತಾರೆ. ಎಷ್ಟು ಪ್ರಯತ್ನಪಟ್ಟರೂ ಕೆಲವೊಮ್ಮೆ ಯಶಸ್ಸು ಸಿಗೋದಿಲ್ಲ. ಇದಕ್ಕೆ ಜಾತಕದಲ್ಲಿರುವ ಗ್ರಹದೋಷ ಕಾರಣವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ನಂತ್ರ ಮಾಡುವ ಕೆಲವೊಂದು ಕೆಲಸಗಳು ಗ್ರಹ ದೋಷ ಕಡಿಮೆ ಮಾಡಿ ಶೀಘ್ರ ಫಲ ನೀಡುತ್ತವೆ.
ಶಿವಪುರಾಣದ ಪ್ರಕಾರ, ಸೂರ್ಯಾಸ್ತದ ನಂತ್ರ ಶಿವಲಿಂಗದ ಬಳಿ ದೀಪ ಬೆಳಗುವ ವ್ಯಕ್ತಿ ಈಶ್ವರನಿಗೆ ಪ್ರಿಯನಾಗಿರುತ್ತಾನೆ. ಮನೆ ಹಾಗೂ ಜೀವನದಲ್ಲಿ ಯಾವುದೇ ಕೊರತೆ ಕಾಣಿಸಿಕೊಳ್ಳುವುದಿಲ್ಲ. ಕುಬೇರ ದೇವ ಕೂಡ ಕೃಪೆ ತೋರುತ್ತಾನೆ.
ಸೂರ್ಯಾಸ್ತದ ನಂತ್ರ ನಿಯಮಿತವಾಗಿ ತುಳಸಿ ಗಿಡದ ಬಳಿ ದೀಪ ಹಚ್ಚಬೇಕು.
ಪ್ರತಿ ಬಾರಿ ಕೆಲಸದಲ್ಲಿ ಅಡ್ಡಿಯಾಗ್ತಿದ್ದರೆ ಇದನ್ನು ದೂರ ಮಾಡಲು ಹನುಮಂತನ ಮುಂದೆ ಸಾಸಿವೆ ಎಣ್ಣೆ ದೀಪ ಹಚ್ಚಬೇಕು.
ಸೂರ್ಯಾಸ್ತದ ನಂತ್ರ ಪ್ರತಿದಿನ ಮನೆಯಲ್ಲಿ ಕರ್ಪೂರವನ್ನು ಹಚ್ಚಬೇಕು. ಇದ್ರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗಿ ಧನಾತ್ಮಕ ಶಕ್ತಿ ನೆಲೆಸುತ್ತದೆ.