ಸಿಹಿ ಆಲೂಗಡ್ಡೆ ಹೆಸರನ್ನು ನೀವು ಕೇಳಿಯೇ ಇರ್ತೀರಾ. ದೇಶದ ಎಲ್ಲ ಭಾಗಗಳಲ್ಲಿಯೂ ಸಿಹಿ ಆಲೂಗಡ್ಡೆ ಸಿಗುತ್ತೆ. ರುಚಿ ಹಾಗೂ ಆರೋಗ್ಯಕ್ಕೆ ಒಳ್ಳೆಯದಾದ ಈ ಸಿಹಿ ಆಲೂಗಡ್ಡೆ ಚಳಿಗಾಲದಲ್ಲಿ ಹೇಳಿ ಮಾಡಿಸಿದ ಆಹಾರ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ ಕ್ಯಾನ್ಸರ್ ನಂತಹ ರೋಗವನ್ನು ಗುಣಪಡಿಸುವ ಶಕ್ತಿ ಈ ಸಿಹಿ ಆಲೂಗಡ್ಡೆಗಿದೆ. ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಈ ಸಿಹಿ ಆಲೂಗಡ್ಡೆಗಿದೆ.
ಸಿಹಿ ಆಲೂಗಡ್ಡೆ ಸೇವನೆಯಿಂದ ಕಣ್ಣಿನ ಕಾಂತಿ ಕಡಿಮೆಯಾಗುವುದಿಲ್ಲ. ದೃಷ್ಠಿ ದೋಷವಿರುವವರು ಇದನ್ನು ಸೇವನೆ ಮಾಡಿದ್ರೆ ಬಹಳ ಒಳ್ಳೆಯದು.
ದೇಶದ ಹಲವಾರು ರಾಜ್ಯಗಳಲ್ಲಿ ಇಂದಿನಿಂದ ಶಾಲೆ ಶುರು: ಟ್ವಿಟ್ಟರ್ ತುಂಬೆಲ್ಲಾ ವಿದ್ಯಾರ್ಥಿಗಳದ್ದೇ ಫೋಟೋ
ಸಿಹಿ ಆಲೂಗಡ್ಡೆ ಸೇವನೆ ಮಾಡುವುದರಿಂದ ಚರ್ಮದಲ್ಲಿ ಸುಕ್ಕು ಕಾಣಿಸಿಕೊಳ್ಳುವುದಿಲ್ಲ. ಚರ್ಮ ಸ್ವಚ್ಛ-ಶುದ್ಧವಾಗಿರುವ ಜೊತೆಗೆ ಸದಾ ಯೌವ್ವನದಲ್ಲಿರುವಂತೆ ಕಾಣಲು ಸಹಾಯವಾಗುತ್ತದೆ.
ಬೀಟಾ-ಕ್ಯಾರೋಟಿನ್ ಅಂಶ ಜಾಸ್ತಿ ಇರುತ್ತದೆ. ಆಂಟಿ ಆಕ್ಸಿಡೆಂಟ್ ಅಂಶ ಕೂಡ ಇದರಲ್ಲಿರುತ್ತದೆ. ಇದು ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮಕ್ಕೆ ರಕ್ಷಣೆ ನೀಡುತ್ತದೆ.
ಜೀವಸತ್ವ ಬಿ-6 ಹಾಗೂ ಪೋಟ್ಯಾಶಿಯಮ್ ಅಂಶ ಕೂಡ ಹೆಚ್ಚಿರುತ್ತದೆ. ರಕ್ತದೊತ್ತಡ ನಿಯಂತ್ರಣಕ್ಕೆ ಇದು ಸಹಕಾರಿ.