alex Certify ಸದಾ ಯಂಗ್‌ ಆಗಿ ಕಾಣಲು ಮಾಡಿ ಫೇಸ್‌ ಯೋಗ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸದಾ ಯಂಗ್‌ ಆಗಿ ಕಾಣಲು ಮಾಡಿ ಫೇಸ್‌ ಯೋಗ…!

ಯಾವಾಗಲೂ ಯಂಗ್‌ ಆಗಿಯೇ ಇರಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಆದ್ರೆ ಹೆಚ್ಚುತ್ತಲೇ ಇರುವ ವಯಸ್ಸು ನಮ್ಮ ಆಸೆಗೆ ತಣ್ಣೀರೆರಚುತ್ತದೆ. ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದರೆ ಚರ್ಮದ ವಯಸ್ಸಾಗುವಿಕೆ, ಸಡಿಲವಾದ ತ್ವಚೆಯಂತಹ ಸಮಸ್ಯೆಗಳನ್ನು ದೂರವಿಡಬಹುದು. ಫೇಸ್ ಯೋಗವು ಇದಕ್ಕೆ ಪರಿಣಾಮಕಾರಿಯಾಗಿದೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಫೇಸ್‌ ಯೋಗ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ.

ಯೋಗಾಸನ ನಮ್ಮ ಜೀವನದ ಮೇಲೆ ಎಲ್ಲ ರೀತಿಯಲ್ಲೂ ಪರಿಣಾಮ ಬೀರುತ್ತದೆ. ಯೋಗವು ಅನೇಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಅದೇ ರೀತಿ ಮುಖದ ತ್ವಚೆಯನ್ನು ಯಂಗ್ ಆಗಿ ಮತ್ತು ಆರೋಗ್ಯಕರವಾಗಿಡಲು ಅದಕ್ಕೆಂದೇ ಮೀಸಲಾದ ನಿರ್ದಿಷ್ಟ ಯೋಗವನ್ನು ಕೂಡ ಮಾಡಬಹುದು. ಇದರಲ್ಲಿ ಮುಖದ ವಿವಿಧ ಭಾಗಗಳಿಗೆ ಸೀಮಿತವಾದ ಯೋಗ ಚಟುವಟಿಕೆಗಳನ್ನು ಮಾಡಲಾಗುತ್ತದೆ. ಒಟ್ಟಾರೆಯಾಗಿ 10 ರಿಂದ 12 ರೀತಿಯ ಆಸನಗಳನ್ನು ಮಾಡಿದರೆ ಚರ್ಮವನ್ನು ಸದಾ ಯಂಗ್‌ ಆಗಿ ಇಟ್ಟುಕೊಳ್ಳಬಹುದು.

ಫೇಸ್‌ ಯೋಗದ ಪ್ರಮುಖ ವಿಧಾನಗಳು

ಸಿಂಹ ಮುದ್ರೆ- ಇದು ಮುಖದ ಸ್ನಾಯುಗಳನ್ನು ಬಿಗಿಗೊಳಿಸುತ್ತದೆ. ಸಡಿಲವಾದ ಚರ್ಮದ ಸಮಸ್ಯೆಯನ್ನು ತೊಡೆದುಹಾಕಬಹುದು.

ನಾಲಿಗೆ ತಡೆ ಯೋಗ- ಈ ಯೋಗಾಸನ ದವಡೆಗೆ ಸರಿಯಾದ ಆಕಾರವನ್ನು ನೀಡುತ್ತದೆ.

ಚಿನ್ ಲಾಕ್- ಡಬಲ್ ಚಿನ್ ಇರುವವರು ಇದರ ಲಾಭವನ್ನು ಪಡೆಯುತ್ತಾರೆ. ಮುಖದ ಸ್ಕಿನ್ ಟೋನ್ ಅನ್ನು ಇದು ಸಮವಾಗಿರಿಸುತ್ತದೆ.

ಫಿಶ್‌ ಫೇಸ್‌ – ಇದನ್ನು ಪ್ರತಿದಿನ ಮಾಡಿದರೆ, ನಿಮ್ಮ ತ್ವಚೆಯು ಬಿಗಿಯಾಗುವುದರ ಜೊತೆಗೆ ಮುಖದ ಆಕಾರವೂ ಟೋನ್ ಆಗುತ್ತದೆ. ಇದರಿಂದ ನೀವು ಉತ್ತಮ ನೋಟವನ್ನು ಪಡೆಯುತ್ತೀರಿ.

ಮೌತ್ವಾಶ್ ಟೆಕ್ನಿಕ್‌ – ನಿಮ್ಮ ಮುಖದ ಮೇಲೆ ಹೆಚ್ಚುವರಿ ಕೊಬ್ಬು ಇದ್ದರೆ ಈ ಯೋಗಾಸನವು ಅದನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಚಿನ್‌ ಅಪ್‌ಲಿಫ್ಟ್‌ – ಕೆನ್ನೆಯ ಕೊಬ್ಬನ್ನು ತೆಗೆದುಹಾಕಲು ಈ ಕ್ರಮವು ಉತ್ತಮವಾಗಿದೆ. ಇದು ನಿಮ್ಮನ್ನು ಹೆಚ್ಚು ಯಂಗ್‌ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ನೆಕ್ ರೋಲ್- ಈ ಚಟುವಟಿಕೆಯು ಕುತ್ತಿಗೆಯ ಚರ್ಮವನ್ನು ಬಿಗಿಗೊಳಿಸಬಹುದು. ವಿಶೇಷವಾಗಿ ನಿಮ್ಮ ದವಡೆಯ ಮೇಲೆ ಇದು ಕೆಲಸ ಮಾಡುತ್ತದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...