ಜೇನುತುಪ್ಪವನ್ನು ಆನಾದಿ ಕಾಲದಿಂದಲೂ ಬಳಸಲಾಗುತ್ತಿದೆ. ಇದು ಸೌಂದರ್ಯವರ್ಧಕ ಹಾಗೂ ಆರೋಗ್ಯವರ್ಧಕವಾಗಿಯೂ ಪ್ರಯೋಜನವಾಗುತ್ತದೆ.
ಜೇನುತುಪ್ಪದಿಂದ ಅನೇಕ ಉಪಯೋಗಗಳಿರುವುದರಿಂದ ಮನೆಯಲ್ಲಿದ್ದರೆ ಒಳ್ಳೆಯದು. ಸುಟ್ಟ ಗಾಯಗಳಿಗೆ ಜೇನು ತುಪ್ಪ ಹಚ್ಚುವುದರಿಂದ ಉರಿ ನಿವಾರಣೆಯಾಗಿ ಗಾಯ ಬಹು ಬೇಗ ವಾಸಿಯಾಗುತ್ತದೆ.
ಕ್ರಮಬದ್ಧವಾಗಿ ಇದನ್ನು ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ. ಹಾಲಿನೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸುತ್ತಿದ್ದರೆ ಮಲಬದ್ಧತೆ ದೂರವಾಗಿ, ರೋಗ ನಿರೋಧಕ ಶಕ್ತಿ ಅಧಿಕವಾಗುತ್ತದೆ. ದಢೂತಿ ಶರೀರದವರು ಹಳೆಯ ಜೇನು ತುಪ್ಪವನ್ನು ನಿತ್ಯವೂ ಸೇವಿಸಿದರೆ ದೇಹದ ತೂಕ ಕಡಿಮೆಯಾಗುತ್ತದೆ. ಬಾಯಿ ಹುಣ್ಣಾದರೆ ಜೇನು ತುಪ್ಪ ಹಚ್ಚಿದಲ್ಲಿ ಗುಣವಾಗುತ್ತದೆ.