ಪ್ರತಿದಿನ ಒಂದು ಮುಷ್ಟಿಯಷ್ಟು ವಾಲ್ನಟ್ಸ್ ತಿಂದ್ರೆ ನಿಮ್ಮ ಒತ್ತಡ ಮಾಯವಾಗಿಬಿಡುತ್ತೆ. ಅಷ್ಟೇ ಅಲ್ಲ ನಿಮ್ಮ ಮನಸ್ಸು ಖುಷಿ-ಖುಷಿಯಾಗಿ ಉಲ್ಲಾಸದಿಂದಿರುತ್ತೆ. ಸಂಶೋಧಕರ ಪ್ರಕಾರ ನಿರಂತರವಾಗಿ 8 ವಾರಗಳ ಕಾಲ ಪ್ರತಿದಿನ ವಾಲ್ನಟ್ಸ್ ಸೇವಿಸುವ ಯುವಕರಲ್ಲಿ ಬದಲಾವಣೆಯನ್ನು ಕಾಣಬಹುದು. ಅವರ ಆರೋಗ್ಯ ಕೂಡ ಸುಧಾರಿಸುತ್ತೆ. ಹೃದಯ ಸಂಬಂಧಿ ಖಾಯಿಲೆ, ಬೊಜ್ಜು, ಸಕ್ಕರೆ ಖಾಯಿಲೆ ಇವೆಲ್ಲವನ್ನು ದೂರಮಾಡಲು ಸಹ ವಾಲ್ನಟ್ಸ್ ಸಹಕಾರಿ.
ಸಂಶೋಧನೆಯ ಪ್ರಕಾರ ವಾಲ್ನಟ್ಸ್ ಸೇವನೆ ಯುವಕರ ಮೂಡನ್ನು ಕೂಡ ಬದಲಾಯಿಸುತ್ತೆ. 18-25 ವರ್ಷದೊಳಗಿನ 64 ವಿದ್ಯಾರ್ಥಿಗಳ ಮೇಲೆ ಪ್ರಯೋಗ ಮಾಡಿ ಸಂಶೋಧಕರು ಈ ತೀರ್ಮಾನಕ್ಕೆ ಬಂದಿದ್ದರು. ಅವರೆಲ್ಲ 8 ವಾರ 3 ಬಾಳೆಹಣ್ಣಿನ ಬ್ರೆಡ್ ಹಾಗೂ ಅರ್ಧ ಕಪ್ ವಾಲ್ನಟ್ಸ್ ಸೇವಿಸಿದ್ದಾರೆ. ಇನ್ನೆಂಟು ವಾರ ಕೇವಲ ವಾಲ್ನಟ್ಸ್ ಮಾತ್ರ ತಿಂದಿದ್ದಾರೆ. ಪ್ರತಿ 8 ವಾರಗಳ ನಂತರ ವಿದ್ಯಾರ್ಥಿಗಳ ಮನಃಸ್ಥಿತಿ ಯಾವ ರೀತಿ ಇದೆ ಅನ್ನೋದನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಒತ್ತಡ, ಆಯಾಸ, ಖಿನ್ನತೆ, ಗೊಂದಲ, ಕೋಪ ಎಲ್ಲವೂ ಅವರಲ್ಲಿ ಮಾಯವಾಗಿತ್ತು. ಆದ್ರೆ ವಾಲ್ನಟ್ಸ್ ಸೇವಿಸಿದ ಯುವತಿಯರ ಮೂಡ್ ನಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.