ಆಧುನಿಕ ಜೀವನಶೈಲಿ, ಒತ್ತಡ, ಆಹಾರ ಕ್ರಮಗಳು ಇವೇ ಮೊದಲಾದ ಕಾರಣಗಳಿಂದ ಅನೇಕರಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಚಿಂತೆಯಾಗಿದೆ.
ಯಾವುದನ್ನೂ ಅತಿಯಾಗಿ ತಿನ್ನುವಂತಿಲ್ಲ. ತಿನ್ನದಿದ್ದರೆ ಮನಸ್ಸು ಒಪ್ಪಲ್ಲ, ಆರೋಗ್ಯದ ಕುರಿತಾಗಿ ಯಾರು ಏನು ಹೇಳಿದರೂ, ಅದನ್ನು ಅನುಸರಿಸುವುದೇ ಕೆಲಸವಾಗಿಬಿಟ್ಟಿದೆ ಕೆಲವರಿಗೆ.
ಇನ್ನು ಆರೋಗ್ಯದ ಚಿಂತೆ ಬಿಡಿ. ಸದಾ ಆರೋಗ್ಯವಾಗಿರಲು ಒಂದಿಷ್ಟು ಸಲಹೆ ಇಲ್ಲಿದ್ದು, ಅವನ್ನು ಅನುಸರಿಸಿ.
ಹೆಚ್ಚಾಗಿ ಸಾವಯವ ಆಹಾರ ಪದಾರ್ಥಗಳನ್ನು ಬಳಸಿ. ತಾಜಾ ಹಾಗೂ ಶುದ್ಧವಾದ ತರಕಾರಿ, ಹಣ್ಣುಗಳನ್ನು ಸೇವಿಸಿರಿ. ಮಾಂಸಹಾರ ಬಳಸುವಾಗ, ಚೆನ್ನಾಗಿ ಬೇಯಿಸಿರಿ. ಆದಷ್ಟು ಪೌಷ್ಠಿಕಾಂಶ ಹೆಚ್ಚಾಗಿರುವ ಮತ್ತು ಕೊಬ್ಬು ಕಡಿಮೆ ಇರುವ ಪದಾರ್ಥಗಳನ್ನು ಸೇವಿಸಿರಿ.
ನಿತ್ಯದ ಜೀವನ ಕ್ರಮಗಳಲ್ಲಿ ಸರಳ ವ್ಯಾಯಾಮ, ನಡಿಗೆ, ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಇವೇ ಮೊದಲಾದ ಕ್ರಮಗಳನ್ನು ಅನುಸರಿಸಿದಲ್ಲಿ ಆರೋಗ್ಯಯುತ ಜೀವನ ನಿಮ್ಮದಾಗುತ್ತದೆ ಎನ್ನುತ್ತಾರೆ ತಜ್ಞರು.