ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇತ್ತೀಚೆಗೆ ಸದನದಲ್ಲಿ ಮಾತನಾಡುತ್ತಿರಬೇಕಾದರೆ ಅವರ ಪಂಚೆ ಕಳಚಿ ಹೋದ ಪ್ರಸಂಗ ಜರುಗಿರುವುದು ನಿಮಗೆ ಗೊತ್ತೇ ಇದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಅಸೆಂಬ್ಲಿಯಲ್ಲಿ ನಡೆದ ಈ ಘಟನೆಯ ವಿಡಿಯೋ ಯೂಟ್ಯೂಬ್ ನಲ್ಲಿ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಅಲ್ಲದೆ ಈ ಪ್ರಸಂಗವು ಹಿಂದಿ ಸಿನಿಮಾವೊಂದರ ದೃಶ್ಯವನ್ನು ನೆನಪಿಸುತ್ತದೆ. ಹಿಟ್ ಕಾಮಿಡಿ ಚಿತ್ರ ‘ಹೇರಾ ಫೆರಿ’ ಇದೇ ರೀತಿಯ ದೃಶ್ಯವನ್ನು ನೆನಪಿಸುತ್ತದೆ ಎಂದು ಕೆಲವು ಬಳಕೆದಾರರು ಹೋಲಿಸಿದ್ದಾರೆ.
ಅಮಾನತುಗೊಂಡಿದ್ದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ಕರ್ತವ್ಯಕ್ಕೆ ಮರಳಬಹುದು; ಶ್ರೀರಾಮುಲು
ಬಾಲಿವುಡ್ ನ ಈ ಸಿನಿಮಾದ ದೃಶ್ಯದಲ್ಲಿ, ಪರೇಶ್ ರಾವಲ್ ಗೆ ತನ್ನ ಧೋತಿ ಕಳಚಿದೆ ಎಂಬುದು ತಿಳಿದಿರಲಿಲ್ಲ. ಇದನ್ನು ಗಮನಿಸಿದ ಅಕ್ಷಯ್ ಕುಮಾರ್ ಅವರ ಕಿವಿಯಲ್ಲಿ ಪಿಸುಗುಟ್ಟಿದ್ದಾರೆ. ಅಕ್ಷಯ್ ಕುಮಾರ್ ಹೇಳುತ್ತಿದ್ದಂತೆ, ಪರೇಶ್ ರಾವಲ್ ಬೇಗನೆ ತನ್ನ ಧೋತಿಯನ್ನು ಎತ್ತಿಕೊಂಡಿದ್ದಾರೆ. ಹೀಗಾಗಿ ಈ ಸಿನಿಮಾದ ದೃಶ್ಯವನ್ನು ಅಸೆಂಬ್ಲಿಯಲ್ಲಿ ಸಿದ್ದರಾಮಯ್ಯ ಅವರ ಪಂಚೆ ಜಾರಿದ ಪ್ರಸಂಗಕ್ಕೆ ಹೋಲಿಸಲಾಗಿದೆ. ಸದ್ಯ ಇಂಟರ್ನೆಟ್ ನಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದೆ.
ಸದನದಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯರ ಬಳಿ ಬಂದ ಡಿ.ಕೆ.ಶಿವಕುಮಾರ್ ಪಂಚೆ ಕಳಚಿದೆ ಎಂದು ಮೆಲ್ಲನೆ ಹೇಳಿದ್ದಾರೆ ಸಿದ್ದರಾಮಯ್ಯ ಕೂಡಲೇ ತಮ್ಮ ಪಂಚೆಯನ್ನು ಸರಿಪಡಿಸಿಕೊಂಡಿದ್ದರು. ಸದನದಲ್ಲಿ ಮುಜುಗರದ ಕ್ಷಣವನ್ನು ತಮಾಷೆಯಾಗಿ ಪರಿವರ್ತಿಸಿದ್ದ ಮಾಜಿ ಸಿಎಂ, “ಕೊರೋನಾ ಬಂದ ಬಳಿಕ ದೇಹದ ತೂಕ ಜಾಸ್ತಿಯಾಗಿದೆ. ಜಿಂದಾಲ್ ಗೆ ಹೋಗಿ ಚಿಕಿತ್ಸೆ ಪಡೆದು ಬಂದ ಬಳಿಕ ವೇಟ್ ಲಾಸ್ ಆಗಿದೆ. ಹೀಗಾಗಿ ಇತ್ತೀಚೆಗೆ ಪಂಚೆ ಜಾರುತ್ತಿದೆ” ಎಂದು ಸಮಜಾಯಿಷಿ ನೀಡಿದ್ದರು.