
ಪ್ರತಿಯೊಬ್ಬರಿಗೂ ಕನಸು ಬೀಳುವುದು ಸಹಜ. ಕನಸಿನಲ್ಲಿ ಬೇರೆ ಬೇರೆ ವಸ್ತು, ವ್ಯಕ್ತಿಗಳು ಕಾಣಿಸಿಕೊಳ್ತಾರೆ. ಕೆಲವು ನೆನಪಿದ್ದರೆ ಮತ್ತೆ ಕೆಲವು ನೆನಪಿರುವುದಿಲ್ಲ. ಸತ್ತ ವ್ಯಕ್ತಿಗಳು ಕನಸಿನಲ್ಲಿ ಬರುವುದುಂಟು. ಇದು ಯಾವ ಸಂಕೇತ ನೀಡುತ್ತದೆ ಗೊತ್ತಾ?
ವಿಜ್ಞಾನದ ಪ್ರಕಾರ, ಸತ್ತ ವ್ಯಕ್ತಿಗಳು ನಮ್ಮಿಂದ ದೂರವಾಗಿದ್ರೂ ಭಾವನಾತ್ಮಕವಾಗಿ ಹತ್ತಿರದಲ್ಲಿಯೇ ಇರ್ತಾರೆ. ನಾವು ಅವ್ರ ಬಗ್ಗೆ ಮಾತನಾಡದೆ ಹೋದ್ರು ಅವ್ರ ಬಗ್ಗೆ ಮನಸ್ಸಿನಲ್ಲಿ ಯೋಚಿಸುತ್ತಿರುತ್ತೇವೆ. ಬೆಳಿಗ್ಗೆ ಎದ್ದಾಗ, ರಾತ್ರಿ ಮಲಗುವಾಗ ಅನೇಕ ಬಾರಿ ಅವ್ರ ನೆನಪು ಮಾಡಿಕೊಳ್ತೇವೆ. ಇದು ಅವ್ರು ಕನಸಿನಲ್ಲಿ ಕಾಣಲು ಒಂದು ಕಾರಣವಾಗಿರುತ್ತದೆ.
ಶಾಸ್ತ್ರಗಳ ಪ್ರಕಾರ, ಕೆಲವೊಮ್ಮೆ ಸತ್ತವರ ಆಸೆ ಇನ್ನೂ ಜೀವಂತವಾಗಿರುತ್ತದೆ. ಅದನ್ನು ನಮಗೆ ಹೇಳಲು ಅವ್ರು ಕನಸಿನಲ್ಲಿ ಬರ್ತಾರೆ. ನಿಮಗೆ ಅವ್ರ ಆಸೆ ಗೊತ್ತಿದ್ದರೆ ಪೂರೈಸಲು ಯತ್ನಿಸಿ. ಇಲ್ಲವೆ ದಾನ, ಧರ್ಮ ಮಾಡಿ ಆತ್ಮಕ್ಕೆ ಶಾಂತಿ ನೀಡಿ.
ಕನಸಿನಲ್ಲಿ ಕೆಲವೊಮ್ಮೆ ಸತ್ತವರು ತೃಪ್ತ ಮುಖದಲ್ಲಿ ಕಾಣಿಸಿಕೊಳ್ತಾರೆ. ಆಗ ಅವ್ರು ನನ್ನ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ನಾನು ಖುಷಿಯಾಗಿದ್ದೇನೆ ಎಂಬ ಸಂದೇಶ ನೀಡಲು ಬಂದಿರುತ್ತಾರೆ. ಪದೇ ಪದೇ ಸತ್ತವರು ಕನಸಿನಲ್ಲಿ ಬಂದ್ರೆ ಆತ್ಮ ಶಾಂತಿಗೆ ಸೂಕ್ತ ದಾನ ಮಾಡಿ.
ಗರುಡ ಪುರಾಣದ ಪ್ರಕಾರ, ಪದೇ ಪದೇ ಸತ್ತವರು ಕನಸಿನಲ್ಲಿ ಬಂದ್ರೆ ಅವ್ರ ಹೆಸರಿನಲ್ಲಿ ರಾಮಯಾಣವನ್ನು ಓದಿಸಬೇಕಂತೆ.