alex Certify ಸತ್ತ ಮೀನನ್ನು ಪ್ಯಾನ್‍ನಲ್ಲಿ ಹಾಕಿದಾಗ ಆಗಿದ್ದೇ ಬೇರೆ..! ವೈರಲ್ ವಿಡಿಯೋ ಕಂಡು ಬೆಚ್ಚಿಬಿದ್ದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತ್ತ ಮೀನನ್ನು ಪ್ಯಾನ್‍ನಲ್ಲಿ ಹಾಕಿದಾಗ ಆಗಿದ್ದೇ ಬೇರೆ..! ವೈರಲ್ ವಿಡಿಯೋ ಕಂಡು ಬೆಚ್ಚಿಬಿದ್ದ ನೆಟ್ಟಿಗರು

The TikTok video left viewers perplexed as most could not bring about a logical explanation to the fish suddenly coming alive. (Representational photo: Canva)ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ಎಂಬ ಹಾಡೊಂದಿದೆ. ಹಾಗೆಯೇ ನೀರೊಳಗಿರುವ ಮೀನುಗಳು ಹೊರಗೆ ಬಂದ್ರೆ ಬದುಕುವ ಸಾಧ್ಯತೆಗಳೇ ಇಲ್ಲ. ಅದರಲ್ಲೂ ಫಿಶ್ ಮಾರ್ಕೆಟ್ ನಲ್ಲಿ ಮೀನನ್ನು ಖರೀದಿಸುವಾಗಲಂತೂ ಮೀನುಗಳು ಅದಾಗಲೇ ಸತ್ತಿರುತ್ತವೆ. ಆದರೆ, ಇಲ್ಲೊಂದೆಡೆ ನಡೆದಿರುವ ವಿಚಿತ್ರ ಘಟನೆ ಬಗ್ಗೆ ಕೇಳಿದ್ರೆ ನೀವು ಶಾಕ್ ಆಗ್ತೀರಾ..!

ಟಿಕ್‌ಟಾಕ್‌ನಲ್ಲಿ ಮೀನಿನ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ಜೊಂಬಿ ಮೀನು ಎಂದು ಕರೆದಿದ್ದಾರೆ. ಚೀನಾದ ಝೆಂಗ್‌ಝೌನಲ್ಲಿ ವೆನ್ ಎಂಬಾತ ಎಂದಿನಂತೆ ಮಾರುಕಟ್ಟೆಗೆ ತೆರಳಿ ಮೀನು ಖರೀದಿಸಿದ್ದ. ಮನೆಗೆ ಬಂದ ಅದನ್ನು ಪ್ಯಾನ್ ನಲ್ಲಿ ಹಾಕಿ ಫ್ರೈ ಮಾಡಲು ಸಿದ್ಧತೆ ನಡೆಸಿದ್ದಾನೆ. ಈ ವೇಳೆ ಸತ್ತಿದ್ದ ಮೀನು ಇದ್ದಕ್ಕಿದ್ದಂತೆ ಚಲಿಸಲಾರಂಭಿಸಿದೆ. ಇದನ್ನು ನೋಡಿದ ವೆನ್ ದಿಗ್ಭ್ರಮೆಗೊಂಡಿದ್ದಾನೆ.

ತನ್ನ ಹೆಂಡತಿಗೆ ಮೀನಿನ ಖಾದ್ಯವನ್ನು ಬಡಿಸುವ ಮೊದಲು ಅದು ಯಾವಾಗ ಚಲನೆಯನ್ನು ನಿಲ್ಲಿಸುತ್ತದೆಯೋ ಎಂದು ನೋಡಲು ಕಾದುಕುಳಿತಿದ್ದ. ಈ ಘಟನೆ ಆತನನ್ನು ಮೂಕವಿಸ್ಮಿತನನ್ನಾಗಿ ಮಾಡಿದೆ. ಈ ವಿಡಿಯೋವನ್ನು ವೆನ್ ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.

ಮೀನನ್ನು ಪ್ಯಾನ್ ಗೆ ಹಾಕಿದಾಗ ಅದರ ಶಾಖದಿಂದಾಗಿ ನರಗಳು ಜೀವಂತವಾಗಿವೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, ಆಕ್ಟೋಪಸ್ ಅನ್ನು ಸೀಫುಡ್ ರೆಸ್ಟೋರೆಂಟ್‌ನಲ್ಲಿ ಬೇಯಿಸುವಾಗ ಬಾಣಸಿಗರು ತುಂಡುಗಳಾಗಿ ಕತ್ತರಿಸಿದರೂ ಅದು ಅಲುಗಾಡಲು ಪ್ರಾರಂಭಿಸಿದ್ದ ಘಟನೆಯನ್ನು ನೆನಪಿಸಿದ್ದಾರೆ.

ಈ ರೀತಿಯ ಮೀನುಗಳನ್ನು ಖರೀದಿಸುವುದು ಒಳ್ಳೆಯದು. ಏಕೆಂದರೆ ಅದು ತಾಜಾವಾಗಿದೆ ಎಂದರ್ಥ ಎಂದು ಮತ್ತೊಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

https://www.youtube.com/watch?v=hrgjdzJ0s2M

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...