alex Certify ಸತತ ಎರಡು ವರ್ಷಗಳಿಂದ ನಯಾಪೈಸೆ ಸಂಬಳ ಪಡೆದಿಲ್ಲ ಭಾರತದ ಈ ಶ್ರೀಮಂತ ಉದ್ಯಮಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತತ ಎರಡು ವರ್ಷಗಳಿಂದ ನಯಾಪೈಸೆ ಸಂಬಳ ಪಡೆದಿಲ್ಲ ಭಾರತದ ಈ ಶ್ರೀಮಂತ ಉದ್ಯಮಿ…!

ವಿಶ್ವದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾದ ಕೋಟ್ಯಾಧಿಪತಿ ಮುಖೇಶ್ ಅಂಬಾನಿ ಸಂಬಳವನ್ನೇ ಪಡೆಯುತ್ತಿಲ್ಲ. ಕರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸತತ ಎರಡನೇ ವರ್ಷವೂ ಮುಖೇಶ್ ಅಂಬಾನಿ ತಮ್ಮ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ನಯಾಪೈಸೆಯನ್ನೂ ವೇತನ ರೂಪದಲ್ಲಿ ಪಡೆದಿಲ್ಲ. ಕೊರೊನಾ ಪೆಂಡಮಿಕ್‌, ವ್ಯಾಪಾರ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಅಂಬಾನಿ ಸ್ವಯಂಪ್ರೇರಿತರಾಗಿ ತಮ್ಮ ಸಂಬಳವನ್ನು ತ್ಯಜಿಸಿದ್ದರು.

RIL ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ 2020-21 ರ ಹಣಕಾಸು ವರ್ಷದಲ್ಲಿ ಅಂಬಾನಿ ಅವರ ಸಂಭಾವನೆ ‘ಶೂನ್ಯ’ ಎಂದು ಹೇಳಿದೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಜೂನ್ 2020ರಲ್ಲಿ ವೇತನ ತ್ಯಜಿಸುವ ನಿರ್ಧಾರ ತೆಗೆದುಕೊಂಡಿದ್ದರು. ಅಂದಿನಿಂದ ಈವರೆಗೂ ಮುಖೇಶ್ ಅಂಬಾನಿ ಒಂದು ಪೈಸೆಯನ್ನೂ ಸಂಬಳವಾಗಿ ತೆಗೆದುಕೊಂಡಿಲ್ಲ. ಈ ಮೂಲಕ ಎಲ್ಲಾ ಶ್ರೀಮಂತ ಉದ್ಯಮಿಗಳಿಗೆ ಉದಾಹರಣೆಯಾಗಿ ನಿಂತಿದ್ದಾರೆ.

ಒಟ್ಟಾರೆ ಮುಖೇಶ್ ಅಂಬಾನಿ ಎರಡು ವರ್ಷಗಳಿಂದ ಸಂಬಳ ತೆಗೆದುಕೊಂಡಿಲ್ಲ. ಈ ಎರಡೂ ವರ್ಷಗಳಲ್ಲಿ ಅವರು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ರಿಲಯನ್ಸ್‌ನಿಂದ ಯಾವುದೇ ಭತ್ಯೆಗಳು, ನಿವೃತ್ತಿ ಪ್ರಯೋಜನಗಳು, ಸ್ಟಾಕ್ ಆಯ್ಕೆಗಳು ಅಥವಾ ಇತರೆ ಪ್ರಯೋಜನಗಳನ್ನು ಸಹ ಪಡೆದಿಲ್ಲ. 2008-09ರಿಂದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರ ವೇತನವನ್ನು 15 ಕೋಟಿ ರೂಪಾಯಿಗೆ ಅವರು ಸೀಮಿತಗೊಳಿಸಿದ್ದರು. ಅವರ ಸೋದರ ಸಂಬಂಧಿಗಳಾದ ನಿಖಿಲ್ ಮತ್ತು ಹೇತಾಲ್ ಮೆಸ್ವಾನಿ ಅವರ ಸಂಭಾವನೆ 24 ಕೋಟಿ ಹಾಗೂ 17.28 ಕೋಟಿ ರೂಪಾಯಿಗಳಷ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...