ಒಂದು ಕ್ಷಣದ ಕೋಪ ಎಂಥಾ ಅನಾಹುತಕ್ಕೂ ಕಾರಣವಾಗಬಹುದು. ಹಾಗಾಗಿ ವ್ಯಕ್ತಿ ಎಷ್ಟೇ ವಿದ್ಯಾವಂತನಾಗಿದ್ದರೂ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ಎಲ್ಲವೂ ನಿರರ್ಥಕವಾದಂತೆ.
ಕೋಪವು ಒಂದು ಭಾವನೆಯಾಗಿರಬಹುದು, ಆದರೆ ಅದು ಅಪಾಯಕಾರಿ ಮಟ್ಟವನ್ನು ತಲುಪಿದರೆ ನಮ್ಮನ್ನೇ ಸುಟ್ಟು ಹಾಕುತ್ತದೆ. ಇಂಥಾ ಕೆಂಡದಂಥ ಕೋಪವನ್ನು ನಿಯಂತ್ರಿಸುವುದು ಹೇಗೆ ಅನ್ನೋದನ್ನು ನೋಡೋಣ.
ವ್ಯಾಯಾಮ: ಕೋಪವನ್ನು ಕಡಿಮೆ ಮಾಡಲು ವ್ಯಾಯಾಮ ಅತ್ಯಂತ ಪರಿಣಾಮಕಾರಿ ಮಾರ್ಗ. ಇದು ಮನಸ್ಸಿನಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ ಮತ್ತು ನಮ್ಮ ಮನಸ್ಸು ಶಾಂತವಾಗಲು ಸಹಕರಿಸುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಕೋಪವನ್ನು ನಿಯಂತ್ರಿಸಬಹುದು.
ಪ್ರೀತಿಪಾತ್ರರೊಂದಿಗೆ ಸಮಸ್ಯೆ ಹಂಚಿಕೊಳ್ಳಿ: ನಿಮ್ಮ ಕಷ್ಟವನ್ನು, ಭಾವನೆಗಳನ್ನು, ಸಮಸ್ಯೆಗಳನ್ನು ಆಪ್ತ ಸ್ನೇಹಿತ ಅಥವಾ ಸಂಬಂಧಿಕರೊಂದಿಗೆ ಹಂಚಿಕೊಂಡಾಗ ನಿಮ್ಮ ಕೋಪವು ಸಾಕಷ್ಟು ತಣ್ಣಗಾಗುತ್ತದೆ. ಇದು ಕೂಡ ಕೋಪ ನಿರ್ವಹಣೆಯ ಮಾರ್ಗಗಳಲ್ಲೊಂದು.
ದೀರ್ಘ ಉಸಿರಾಟ: ಕೋಪವನ್ನು ನಿಯಂತ್ರಿಸಲಾಗುತ್ತಿಲ್ಲ ಎಂದು ಅನಿಸಿದಾಗ ಆಳವಾದ ಮತ್ತು ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ. ನೀವು ಸಂಪೂರ್ಣವಾಗಿ ವಿಶ್ರಾಂತಿ ಪಡೆಯುವವರೆಗೆ ಈ ಪ್ರಕ್ರಿಯೆಯನ್ನು ಮಾಡಿ.
ಪಂಚಿಂಗ್ ಬ್ಯಾಗ್: ಪಂಚಿಂಗ್ ಬ್ಯಾಗ್‌ಗಳು ಮತ್ತು ಪಂಚಿಂಗ್ ಬೋರ್ಡ್‌ಗಳನ್ನು ಜಪಾನ್‌ನ ಅನೇಕ ಕಚೇರಿಗಳಲ್ಲಿ ಇರಿಸಲಾಗುತ್ತದೆ. ನೀವು ಸೀನಿಯರ್ಸ್ ಅಥವಾ ಬಾಸ್ ಮೇಲೆ ಕೋಪ ಬಂದ್ರೆ ಪಂಚಿಂಗ್ ಬ್ಯಾಗ್ ಮೇಲೆ ಗುದ್ದಿ ಸಮಾಧಾನ ಮಾಡಿಕೊಳ್ಳಬಹುದು. ಮನೆಯಲ್ಲಿಯೂ ಅದೇ ತಂತ್ರವನ್ನು ಪ್ರಯತ್ನಿಸಬಹುದು. ಇದು ಕೋಪವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
ಯೋಗ ಮತ್ತು ಧ್ಯಾನ: ಯೋಗ ಅಥವಾ ಧ್ಯಾನವು ನಮ್ಮ ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ವಿಪರೀತ ಕೋಪ ಬರುವವರು ಮನಸ್ಸಿನ ಶಾಂತಿಯನ್ನು ಯೋಗ ಮತ್ತು ಧ್ಯಾನ ಮಾಡಬೇಕು. ಯೋಗ, ಧ್ಯಾನದಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.