ಪ್ರತಿದಿನ ಕೆಲಸ ಮಾಡುವಾಗ ಸಣ್ಣ-ಪುಟ್ಟ ಗಾಯಗಳಾಗುತ್ವೆ. ಮನೆಯಲ್ಲಿ ಸಣ್ಣ ಮಕ್ಕಳಿದ್ದರಂತೂ ಗಾಯ ಮಾಮೂಲಿ. ಈ ಗಾಯಗಳಿಂದ ಅಲ್ಪ-ಸ್ವಲ್ಪ ರಕ್ತ ಬರುತ್ತೆ. ಇದಕ್ಕೆ ಮನೆಯಲ್ಲಿಯೇ ನೀವು ತಕ್ಷಣ ಪರಿಹಾರ ಕಂಡುಕೊಳ್ಳಬಹುದು.
ಗಾಯವಾದ ತಕ್ಷಣ ಮೊದಲು ತಣ್ಣನೆಯ ನೀರಿನಲ್ಲಿ ಗಾಯವನ್ನು ಕ್ಲೀನ್ ಮಾಡಿ. ಯಾವುದೇ ಸೋಪ್ ಬಳಸಬೇಡಿ.
ಬೆಳ್ಳುಳ್ಳಿ, ಸೋಂಕು ಹರಡುವುದನ್ನು ತಡೆಯುತ್ತದೆ. ಹಾಗಾಗಿ ಗಾಯವಾದ ಜಾಗಕ್ಕೆ ಬೆಳ್ಳುಳ್ಳಿ ರಸವನ್ನು ಹಚ್ಚಿ. ಇದ್ರಿಂದ ನೋವು ಕಡಿಮೆಯಾಗುತ್ತದೆ.
ಅರಿಶಿನ ಎಂಟಿಬಯೋಟಿಕ್ ಹಾಗೂ ನಂಜು ನಿರೋಧಕ ಶಕ್ತಿ ಹೊಂದಿದೆ. ಗಾಯವಾದ ಜಾಗಕ್ಕೆ ಅರಿಶಿನವನ್ನು ಹಾಕಿ. ತಕ್ಷಣ ರಕ್ತ ಸೋರುವುದು ಕಡಿಮೆಯಾಗಿ ನೋವು ಕಡಿಮೆಯಾಗುತ್ತದೆ. ಜೊತೆಗೆ ಸೋಂಕು ಹರಡದಂತೆ ತಡೆಯುತ್ತದೆ.
ಜೇನು ತುಪ್ಪದ ಹನಿಯನ್ನು ಗಾಯಕ್ಕೆ ಹಾಕಿ ಪಟ್ಟಿ ಕಟ್ಟುವುದು ಬಹಳ ಒಳ್ಳೆಯದು.
ಅಲೋವೆರಾ ಬಳಸಬಹುದುದಾಗಿದೆ. ಅಲೋವೆರಾ ರಸವನ್ನು ಗಾಯದ ಮೇಲೆ ಹಾಕಿ ಸ್ವಲ್ಪಹೊತ್ತು ಬಿಡಿ.
ವೈಟ್ ವಿನೆಗರ್ ಬಳಕೆಯಿಂದ ನೋವು ಕಡಿಮೆಯಾಗುತ್ತದೆ. ಇದರಿಂದ ಸೋಂಕನ್ನು ತಡೆಗಟ್ಟಬಹುದಾಗಿದೆ.
ಗಾಯ ಗುಣಪಡಿಸಲು ಈರುಳ್ಳಿ ರಸ ಒಳ್ಳೆಯದು. ಇದು ಬಹು ಬೇಗ ಗಾಯವನ್ನು ಕಡಿಮೆ ಮಾಡುತ್ತದೆ.