ದೇಹ ತೂಕ ಕಡಿಮೆ ಮಾಡಿಕೊಳ್ಳುವ ಪ್ಲಾನ್ ಹಾಕಿಕೊಂಡಿದ್ದೀರಾ….? ಹಾಗಿದ್ದರೆ ರಾತ್ರಿ ವೇಳೆ ನೀವು ಕಡ್ಡಾಯವಾಗಿ ಈ ಕೆಲವು ಆಹಾರಗಳಿಂದ ದೂರವಿರಿ.
ರಾತ್ರಿ ವೇಳೆ ಕಡಿಮೆ ಕಾರ್ಬೋ ಹೈಡ್ರೇಟ್ ಇರುವ ಆಹಾರ ಪದಾರ್ಥಗಳನ್ನೇ ಸೇವಿಸಿ. ಉದಾಹರಣೆಗೆ ಮಾಂಸಾಹಾರ ಅದರಲ್ಲೂ ಮಟನ್ ನಿಂದ ಕಡ್ಡಾಯವಾಗಿ ದೂರವಿರಿ.
ಹಲವು ಬಗೆಯ ಸಿಹಿಗಳು, ಐಸ್ ಕ್ರೀಮ್ ಗಳು, ಚೀಸ್ ಗಳನ್ನು ರಾತ್ರಿ ವೇಳೆ ಸೇವಿಸದಿರಿ. ಇದರಿಂದ ದೇಹದ ತೂಕ ಇಳಿಸಲು ಸಾಧ್ಯವೇ ಇಲ್ಲ ಎಂಬುದು ನಿಮಗೆ ನೆನಪಿರಲಿ.
ಟೊಮೆಟೊ ಸಾಸ್ ನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆಯಂಶ ಇರುತ್ತದೆ ಮತ್ತು ದೇಹದಲ್ಲಿ ಆಸಿಡಿಟಿ ಆಗುವ ಸಾಧ್ಯತೆಗಳು ಹೆಚ್ಚು. ಬ್ರೊಕೋಲಿ, ಡಾರ್ಕ್ ಚಾಕೊಲೇಟ್ ಗಳನ್ನೂ ರಾತ್ರಿ ವೇಳೆ ಸೇವಿಸದಿರಿ.