alex Certify ಆರೋಗ್ಯಕರ ಸಜ್ಜೆ ರೊಟ್ಟಿ ಸವಿದು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರ ಸಜ್ಜೆ ರೊಟ್ಟಿ ಸವಿದು ನೋಡಿ

ಸಜ್ಜೆ ಆರೋಗ್ಯಕ್ಕೆ ತುಂಬಾ ಒಳ್ಖೆಯದು. ಇದರಲ್ಲಿ ನಾರಿನಾಂಶ ಹೇರಳವಾಗಿದೆ. ದೇಹದ ತೂಕ ಇಳಿಸಿಕೊಳ್ಳುವವರಿಗೂ ಇದು ಹೇಳಿ ಮಾಡಿಸಿದ್ದು. ಸುಲಭವಾಗಿ ಮಾಡುವ ಸಜ್ಜೆ ರೊಟ್ಟಿ ವಿಧಾನ ಇಲ್ಲಿದೆ.

1 ½ ಕಪ್ ನಷ್ಟು ಸಜ್ಜೆಯನ್ನು ಚೆನ್ನಾಗಿ ತೊಳೆದು ಅದನ್ನು 8 ಗಂಟೆಗಳ ಕಾಲ ನೆನೆಸಿಡಿ. ನಂತರ ಒಂದು ಮಿಕ್ಸಿ ಜಾರಿಗೆ 1 ಇಂಚು ಶುಂಠಿ, 2 ಹಸಿಮೆಣಸು ½ ಕಪ್ ಕಾಯಿತುರಿ, ನೆನೆಸಿಟ್ಟುಕೊಂಡ ಸಜ್ಜೆ, ಸ್ವಲ್ಪ ನೀರು ಸೇರಿಸಿ ತರಿ ತರಿಯಾಗಿ ರುಬ್ಬಿಕೊಳ್ಳಿ.

ನಂತರ ಇದನ್ನು ಒಂದು ಬೌಲ್ ಗೆ ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಉಪ್ಪು, 1 ಕಪ್ ಮೆಂತೆ ಸೊಪ್ಪು, ½ ಕಪ್ ಈರುಳ್ಳಿ, ಸ್ವಲ್ಪ ಕೊತ್ತಂಬರಿಸೊಪ್ಪು, ತುರಿದ ಕ್ಯಾರೆಟ್ ¼ ಕಪ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ನಂತರ 3 ಟೇಬಲ್ ಸ್ಪೂನ್ ನಷ್ಟು ಅಕ್ಕಿ ಹಿಟ್ಟು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ನಂತರ ಒಂದು ಬಾಳೆಲೆಗೆ ಎಣ್ಣೆ ಸವರಿಕೊಂಡು ಈ ಹಿಟ್ಟಿನಿಂದ ಸ್ವಲ್ಪ ಮಿಶ್ರಣ ತೆಗೆದುಕೊಂಡು ಕೈಯಿಂದ ರೊಟ್ಟಿ ತಟ್ಟಿ ಕಾದ ತವಾದಲ್ಲಿ ಕರಿಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...