ಬೆಳಗಾವಿ: ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಸಿಗಲಿ, ಬಿಡಲಿ ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ತೆಗೆದ ಖುಷಿ ನನಗಿದೆ ಎಂದು ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಆರ್ ಎಸ್ ಎಸ್ ಮುಖಂಡರನ್ನು ಭೇಟಿಯಾದ ಬಳಿಕ ಮಾತನಾಡಿದ ರಮೇಶ್ ಜಾರಕಿಹೊಳಿ, ಮೈತ್ರಿ ಸರ್ಕಾರ ತೆಗೆಯದಿದ್ದರೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಿತ್ತು. ಸಚಿವರಾಗಬೇಕು ಎಂಬ ಆಸೆ ಜಾರಕಿಹೊಳಿ ಕುಟುಂಬಕ್ಕೆ ಇಲ್ಲ. ನಾನು ಸಚಿವನಾಗುತ್ತೇನೋ ಇಲ್ಲವೋ ಅದು ಬೇರೆ ಪ್ರಶ್ನೆ ಆದರೆ ನಾನೀಗ ಸಚಿವ ಸ್ಥಾನಕ್ಕಿಂತಲೂ ಮೇಲೆ ಇದ್ದೇನೆ ಎಂದರು.
ಆರೋಗ್ಯಕರ ಎಳ್ಳು ಜ್ಯೂಸ್ ಸವಿಯಿರಿ
ಲಕ್ಷ್ಮಣ್ ಸವದಿ ಅವರನ್ನು ಸಂಪುಟದಿಂದ ಕೈಬಿಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸವದಿ ಅವರಿಗೆ ಡಿಸಿಎಂ ಹುದ್ದೆ ನೀಡಿದಾಗಲೂ ಏಕೆ ಎಂದು ಕೇಳಿಲ್ಲ. ಈಗ ಸಂಪುಟದಿಂದ ಕೈಬಿಟ್ಟಾಗಲೂ ನಾನು ಕೇಳಲ್ಲ. ಬಿಜೆಪಿ ಹೈಕಮಾಂಡ್ ನಿರ್ಧಾರಗಳಿಗೆ ನಾವೆಲ್ಲರೂ ಬದ್ಧ. 2023ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿ ಎಂಬ ಉದ್ದೇಶದಿಂದ ತ್ಯಾಗದ ಮನೋಭಾವದಿಂದ ಕೆಲಸ ಮಾಡುತ್ತೇವೆ ಎಂದು ಹೇಳಿದರು.