alex Certify ಸಚಿವ ಸ್ಥಾನ ಸಿಗದಿದ್ದಕ್ಕೆ ಬಹಿರಂಗವಾಗಿಯೇ ಈಶ್ವರಪ್ಪ ಅಸಮಾಧಾನ; ಇಂದಿನ ಪತ್ರಿಕಾಗೋಷ್ಠಿಯತ್ತ ಎಲ್ಲರ ಚಿತ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಚಿವ ಸ್ಥಾನ ಸಿಗದಿದ್ದಕ್ಕೆ ಬಹಿರಂಗವಾಗಿಯೇ ಈಶ್ವರಪ್ಪ ಅಸಮಾಧಾನ; ಇಂದಿನ ಪತ್ರಿಕಾಗೋಷ್ಠಿಯತ್ತ ಎಲ್ಲರ ಚಿತ್ತ

ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪನವರು ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಮುಕ್ತರಾಗಿದ್ದರೂ ಸಹ ಈವರೆಗೆ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನಕ್ಕೂ ತಾವು ಹೋಗುವುದಿಲ್ಲ ಎಂಬ ಮಾತುಗಳನ್ನಾಡಿದ್ದಾರೆ.

ಈಶ್ವರಪ್ಪನವರು ರಾಜೀನಾಮೆ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಆರೋಪ ಮುಕ್ತರಾದ ಬಳಿಕ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದು, ಆದರೆ ಈವರೆಗೂ ಅದನ್ನು ನೆರವೇರಿಸಿಲ್ಲ ಎಂಬ ಸಿಟ್ಟು ಈಶ್ವರಪ್ಪನವರಲ್ಲಿದೆ ಎನ್ನಲಾಗಿದೆ. ಅಲ್ಲದೆ ತಮಗೆ ಮತ್ತೆ ಸಚಿವ ಸ್ಥಾನ ಸಿಗದಿರುವುದರ ಹಿಂದೆ ಸ್ವಪಕ್ಷೀಯ ಹಿರಿಯ ನಾಯಕರ ಕೈವಾಡವೂ ಇದೆ ಎಂಬ ಅನುಮಾನ ಅವರನ್ನು ಕಾಡುತ್ತಿದೆ ಎಂದು ಹೇಳಲಾಗಿದೆ.

ಅಲ್ಲದೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ತಮಗೆ ಸಚಿವ ಸ್ಥಾನ ಸಿಕ್ಕರೆ ಜನತಾ ನ್ಯಾಯಾಲಯದ ಮುಂದೆ ಹೋಗಲು ಅನುಕೂಲವಾಗುತ್ತದೆ ಎಂಬ ಲೆಕ್ಕಚಾರ ಈಶ್ವರಪ್ಪನವರಲ್ಲಿದೆ. ಆದರೆ ತಮಗೆ ಸಚಿವ ಸ್ಥಾನ ನೀಡುವ ಯಾವುದೇ ಲಕ್ಷಣಗಳು ಕಾಣದ ಕಾರಣ ಬೆಳಗಾವಿ ಅಧಿವೇಶನಕ್ಕೆ ಗೈರು ಹಾಜರಾಗುವ ಮೂಲಕ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಇದರ ಮಧ್ಯೆ ಇಂದು ನಡೆಸಲಿರುವ ಪತ್ರಿಕಾಗೋಷ್ಠಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...