ಸಚಿವ, ಮಾಜಿ ಶಾಸಕರು ಭೇಟಿ ನೀಡಿದ್ದ ವೇಳೆಯೇ ಗ್ರಾಮಸ್ಥರು ಜಿಲ್ಲಾಧಿಕಾರಿ ಕಾಲಿಗೆ ಬಿದ್ದಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಚಿಕ್ಕಕಲ್ಯಾ ಗ್ರಾಮಕ್ಕೆ ಗೋಮಾಳ ಜಮೀನಿನ ಪರಿಶೀಲನೆಗೆಂದು ಸಚಿವರೊಂದಿಗೆ ಜಿಲ್ಲಾಧಿಕಾರಿ ಅವಿನಾಶ್ ಭೇಟಿ ನೀಡಿದ ವೇಳೆ ಈ ಘಟನೆ ನಡೆದಿದೆ.
ಕಳೆದ 50 ವರ್ಷಗಳಿಂದ ಗೋಮಾಳ ಜಮೀನನ್ನು ಈ ರೈತರು ಉಳುಮೆ ಮಾಡಿಕೊಂಡು ಬಂದಿದ್ದು, ಇದೀಗ ಶೈಕ್ಷಣಿಕ ಹೆಸರಿನಲ್ಲಿ ಕೈ ತಪ್ಪುವ ಭೀತಿ ಎದುರಾಗಿದೆ. ಹೀಗಾಗಿ ಸಚಿವ ಅಶ್ವತ ನಾರಾಯಣ ಹಾಗೂ ಮಾಜಿ ಶಾಸಕ ಬಾಲಕೃಷ್ಣ ಅವರ ಮುಂದೆಯೇ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಾಲಿಗೆ ಬಿದ್ದಿದ್ದಾರೆ.