ಬೆಂಗಳೂರು: ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಬಹಳ ಬುದ್ಧಿವಂತರಿದ್ದಾರೆ. ಬಹಳ ಬುದ್ಧಿವಂತರಾದರೂ ನಮಗೆ ಸಮಸ್ಯೆಯೇ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸಚಿವ ಸುಧಾಕರ್ ಕಾಲೆಳೆದಿದ್ದಾರೆ.
ವಿಧಾನಸೌಧದಲ್ಲಿ ನಡೆದ ಆರೋಗ್ಯ ಇಲಾಖೆಯ 120 ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸುಧಾಕರ್, ಇಲಾಖೆಯಿಂದ 1 ಲಕ್ಷ ಜನರಿಗೆ ಒಂದು ಆಂಬುಲನ್ಸ್ ರೀತಿಯಲ್ಲಿ ಆಂಬುಲೆನ್ಸ್ ಸೇವೆ ಲಭ್ಯವಿದೆ. ಅದನ್ನು ಮುಂದಿನ ದಿನಗಳಲ್ಲಿ 40 ಸಾವಿರ ಜನರಿಗೆ ಒಂದು ಆಂಬುಲೆನ್ಸ್ ನಂತೆ ಹೆಚ್ಚಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಈ ಮೂಲಕ ರಾಜಧಾನಿ ಬೆಂಗಳೂರಿನಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
73ರಲ್ಲೂ ಸಲೀಸಾಗಿ ಸ್ಕೇಟಿಂಗ್ ಮಾಡುವ ಚಿರುತ್ಸಾಹಿ
ಆರೋಗ್ಯ ಸಚಿವರ ಹೇಳಿಕೆಗೆ ವೇದಿಕೆ ಮೇಲೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವರು ಬಹಳ ಬುದ್ಧಿವಂತರು. ಬಹಳ ಬುದ್ಧಿವಂತಿಕೆ ಕೂಡ ನಮಗೆ ಸಮಸ್ಯೆಯಾಗುತ್ತದೆ. ಕಾರಣ ಈಗಷ್ಟೇ ಅವರೇ ಹೇಳಿದಂತೆ 1 ಲಕ್ಷ ಜನರಿಗೆ ಒಂದು ಆಂಬುಲೆನ್ಸ್ ರೀತಿಯಲ್ಲಿ ಆಂಬುಲೆನ್ಸ್ ಸೇವೆ ಸದ್ಯಕ್ಕೆ ಲಭ್ಯವಿದೆ. ಅದನ್ನು ಮುಂದಿನ ದಿನಗಳಲ್ಲಿ 40 ಸಾವಿರ ಜನರಿಗೆ ಒಂದು ಆಂಬುಲೆನ್ಸ್ ನಂತೆ ಹೆಚ್ಚಿಸುವ ಉದ್ದೇಶವಿದೆ ಎಂದು ಹೇಳುವ ಮೂಲಕ ಆರೋಗ್ಯ ಇಲಾಖೆಗೆ ಹೆಚ್ಚಿನ ಹಣ ಬಿಡುಗಡೆಗೆ ಪರೋಕ್ಷ ಪ್ರಸ್ತಾವನೆ ಸಲ್ಲಿಸಿದ್ದಾರೆ. ಹೀಗಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ನಿರೀಕ್ಷಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತೆ ಎಂದರು.
ಅಲ್ಲದೇ ಇದೇ ವೇಳೆ ಮುಂಬರುವ ದಿನಗಳಲ್ಲಿ ಆರೋಗ್ಯ ಇಲಾಖೆಯಲ್ಲಿಯೂ ಸಾಕಷ್ಟು ಬದಲಾವಣೆ ತರಲಾಗುವುದು ಎಂದು ಹೇಳುವ ಮೂಲಕ ಸಿಎಂ, ಸಚಿವರಿಗೆ ಪರೋಕ್ಷ ಟಾಂಗ್ ನೀಡಿದರು.