ಉತ್ತರ ಕನ್ನಡ: ಜಿಲ್ಲಾ ಉಸ್ತುವಾರಿ ಸಚಿವರ ಸಭೆಗೆ ತೆರಳುತ್ತಿದ್ದ ವೇಳೆ ಕಾರು ಪಲ್ಟಿಯಾಗಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಾವನ್ನಪ್ಪಿರುವ ಧಾರುಣ ಘಟನೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಬಾಳೆಗುಳಿ ಕ್ರಾಸ್ ಬಳಿ ನಡೆದಿದೆ.
ಪಿಡಬ್ಲ್ಯೂಡಿ ಎಇಇ ಮುದುಕಣ್ಣನವರ್ ಮೃತ ದುರ್ದೈವಿ. ಕೋವಿಡ್ ಹಾಗೂ ನೆರೆ ನಿರ್ವಹಣೆ ನಿಟ್ಟಿನಲ್ಲಿ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಬಾಳೆಗುಳಿ ಕ್ರಾಸ್ ಬಳಿ ಕಂದಕಕ್ಕೆ ಕಾರು ಉರುಳಿ ಈ ದುರಂತ ಸಂಭವಿಸಿದೆ.
ಕಾರಿನಲ್ಲಿ ಇದ್ದ ಇನ್ನುಳಿದ ಮೂವರು ಅಧಿಕಾರಿಗಳಿಗೂ ಗಂಭೀರವಾಗಿ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.