ಬೇಸಿಗೆ ಕಾಲದಲ್ಲಿ ಐಸ್ ಕ್ರೀಂಗೆ ಬೇಡಿಕೆ ಹೆಚ್ಚು. ಬಿಸಿಲಿನ ತಾಪಕ್ಕೆ ಏನಾದರೂ ತಂಪು ತಂಪಾಗಿರುವುದನ್ನು ತಿನ್ನಬೇಕು ಅನಿಸುತ್ತಿರುತ್ತದೆ.
ಹೊರಗಡೆಯಿಂದ ಐಸ್ ಕ್ರೀಂ ತಂದು ತಿನ್ನುವುದಕ್ಕಿಂತ ಮನೆಯಲ್ಲಿ ಸುಲಭವಾಗಿ ಕಲ್ಲಂಗಡಿ ಹಣ್ಣಿನ ಐಸ್ ಕ್ಯಾಂಡಿ ಮಾಡಿಕೊಂಡು ತಿನ್ನಬಹುದು.
ಮಕ್ಕಳಿಗೂ ತುಂಬಾ ಇಷ್ಟವಾಗುತ್ತದೆ.
ಬೇಕಾಗುವ ಸಾಮಾಗ್ರಿಗಳು: ಕಲ್ಲಂಗಡಿ ಹಣ್ಣು-1 ಕಪ್, ½ ಕಪ್ ಸಕ್ಕರೆ, ಲಿಂಬೆಹಣ್ಣಿನ ರಸ-1 ಟೇಬಲ್ ಸ್ಪೂನ್, ½ ಟೀ ಸ್ಪೂನ್ ಉಪ್ಪು, ಸ್ವಲ್ಪ ಏಲಕ್ಕಿ ಪುಡಿ, ಐಸ್ ಕ್ರೀಂ ಕಡ್ಡಿ.
ಮಾಡುವ ವಿಧಾನ:
ಒಂದು ಮಿಕ್ಸಿ ಜಾರಿಗೆ ಕತ್ತರಿಸಿಟ್ಟುಕೊಂಡ ಕಲ್ಲಂಗಡಿ ಹಣ್ಣಿನ ಹೋಳು, ಏಲಕ್ಕಿ ಪುಡಿ, ಸಕ್ಕರೆ, ಉಪ್ಪು, ಲಿಂಬೆ ಹಣ್ಣಿನ ರಸ, ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಪಾತ್ರೆಗೆ ಸೋಸಿಕೊಳ್ಳಿ. ಆಮೇಲೆ ಐಸ್ ಕ್ಯಾಂಡಿ ಮೌಲ್ಡ್ ಗೆ ಹಾಕಿ ಫ್ರೀಜರ್ ನಲ್ಲಿ 8 ಗಂಟೆಗಳ ಕಾಲ ಇಡಿ. ನಂತರ ಇದನ್ನು ತೆಗೆದು ಮನೆಮಂದಿಯೆಲ್ಲಾ ಸವಿಯಿರಿ.