alex Certify ಸಖತ್ ಬ್ಯೂಟಿಫುಲ್ ಆಗಿದೆ ʼಬಾಳೆಬರೆʼ ಫಾಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಖತ್ ಬ್ಯೂಟಿಫುಲ್ ಆಗಿದೆ ʼಬಾಳೆಬರೆʼ ಫಾಲ್ಸ್

ಮಳೆಗಾಲದಲ್ಲಿ ಪಶ್ಚಿಮಘಟ್ಟ ನಳನಳಿಸುತ್ತದೆ. ಹಸಿರನ್ನೇ ಹೊದ್ದುಕೊಂಡ ಬೆಟ್ಟಗಳು, ಬೆಟ್ಟಕ್ಕೆ ಮುತ್ತಿಕ್ಕುವ ಮೋಡಗಳು, ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುವ ಜಲಪಾತಗಳು…ಹೀಗೆ ಹೊಸತೊಂದು ಲೋಕವೇ ಧರೆಗಿಳಿದ ಅನುಭವವಾಗುತ್ತದೆ.

ಶಿವಮೊಗ್ಗ ಜಿಲ್ಲೆಯಲ್ಲಿರುವ ಬಾಳೆಬರೆ ಫಾಲ್ಸ್ ಸೌಂದರ್ಯಕ್ಕೆ ಮನ ಸೋಲದವರಿಲ್ಲ. ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ-ಉಡುಪಿ ಜಿಲ್ಲೆ ಸಿದ್ದಾಪುರ ರಸ್ತೆಯಲ್ಲಿ ಸಾಗಿದರೆ, ಮುಂಗಾರು ಮಳೆಯ ಜೊತೆಗೆ ಬ್ಯೂಟಿಫುಲ್ ಫಾಲ್ಸ್ ನಿಮ್ಮ ಕಣ್ಣಿಗೆ ಬೀಳುತ್ತದೆ.

ಇದಲ್ಲದೇ ಇನ್ನೂ ಹಲವು ಮಾರ್ಗಗಳ ಮೂಲಕ ಬಾಳೆಬರೆ ಫಾಲ್ಸ್ ನೋಡಲು ಬರಬಹುದಾಗಿದೆ. ಸುಮಾರು 150 ಅಡಿ ಎತ್ತರದಿಂದ ಬಂಡೆಯಿಂದ, ಬಂಡೆಗೆ ನೀರು ಧುಮ್ಮಿಕ್ಕುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಿದ್ದಂತೆ.

ಅತಿ ಹೆಚ್ಚು ಮಳೆಯಾಗುವ ಆಗುಂಬೆಗೆ ಪೈಪೋಟಿ ನೀಡುವಂತೆ ಹುಲಿಕಲ್ ಘಾಟ್ ನಲ್ಲಿ ಮಳೆಯಾಗುತ್ತದೆ. ಮಳೆಗಾಲದಲ್ಲಿ ಬಾಳೆಬರೆ ಫಾಲ್ಸ್ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವುದೇ ಮನಸಿಗೆ ಮುದ ನೀಡುತ್ತದೆ.

ಜೀವಕಳೆ ಪಡೆದಿರುವ ಬಾಳೆಬರೆ ಫಾಲ್ಸ್ ನ ವೈಯ್ಯಾರವನ್ನು ನೀವೂ ಮಳೆಗಾಲ ಮುಗಿಯುವದರೊಳಗೆ ನೋಡಿ ಬನ್ನಿ.

ಅಂದಹಾಗೇ ಸುತ್ತಮುತ್ತ ಸಾವೆಹಕ್ಲು, ಚಕ್ರಾ, ವರಾಹಿ ಡ್ಯಾಂ, ಕವಲೇದುರ್ಗ ಮೊದಲಾದ ಪ್ರವಾಸಿ ಸ್ಥಳಗಳಿದ್ದು, ಮೊದಲೇ ಮಾಹಿತಿ ಪಡೆದುಕೊಂಡು ಹೋದರೆ ಅನುಕೂಲವಾಗುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...