ಹಲಸಿನ ಹಣ್ಣಿನ ತೊಳೆ 1 ಕಪ್
ಸಕ್ಕರೆ 1 ಕಪ್
ತೆಂಗಿನತುರಿ 1/4 ಕಪ್
ಗೋಧಿ ಪುಡಿ 1/2 ಕಪ್
ಶುಂಠಿ ಪುಡಿ 1/2 ಚಮಚ
ಕಾಳುಮೆಣಸಿನ ಪುಡಿ 1/4 ಚಮಚ
ತುಪ್ಪ 1 ಚಮಚ
ಗೋಡಂಬಿ ಸ್ವಲ್ಪ
ಮಾಡುವ ವಿಧಾನ
ಮೊದಲು ಹಲಸಿನ ಹಣ್ಣಿಗೆ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಬಾಣಲೆಯನ್ನು ಒಲೆಯ ಮೇಲಿಟ್ಟು ರುಬ್ಬಿಕೊಂಡ ಹಲಸಿನ ಹಣ್ಣಿನ ಮಿಶ್ರಣವನ್ನು ಹಾಕಬೇಕು. ಆ ಹಣ್ಣಿನ ಮಿಶ್ರಣವು ಚೆನ್ನಾಗಿ ಬೇಯಬೇಕು. ನಂತರ ಈ ಮಿಶ್ರಣಕ್ಕೆ ತೆಂಗಿನತುರಿ, ಸಕ್ಕರೆಯನ್ನು ಹಾಕಿ ಕುದಿಸಬೇಕು. ಸಕ್ಕರೆಯು ಕರಗಿ ನೀರಾದ ಮೇಲೆ ಗೋಧಿ ಪುಡಿಯನ್ನು ಹಾಕಿ ಮಿಶ್ರಣ ಗಟ್ಟಿಯಾಗುವವರೆಗೂ ಕುದಿಸಬೇಕು.
ಬಳಿಕ ಶುಂಠಿ ಪುಡಿ, ಕಾಳುಮೆಣಸಿನ ಪುಡಿಯನ್ನು ಹಾಕಿ ಬಾಣಲೆಯ ತಳ ಬಿಡುವ ತನಕ ಕಾಯಿಸಬೇಕು. ನಂತರ ಒಲೆಯಿಂದ ಕೆಳಗಿಳಿಸಿ ಕೈಗೆ ತುಪ್ಪವನ್ನು ಹಚ್ಚಿಕೊಂಡು ಸಣ್ಣ ಸಣ್ಣ ಚಾಕಲೇಟ್ ಹದಕ್ಕೆ ಅಥವಾ ಸ್ವಲ್ಪ ಚಪ್ಪಟೆ ಮಾಡಿ ತಟ್ಟೆಯಲ್ಲಿ ಹಾಕಿಕೊಳ್ಳಬೇಕು. ಅದರ ಅಲಂಕಾರಕ್ಕೆ ಗೋಡಂಬಿಯನ್ನು ಹಾಕಿದರೆ ಇನ್ನೂ ಚೆನ್ನಾಗಿರುತ್ತದೆ. ಅದು ಆರಿದ ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿ ಮುಚ್ಚಿಡಬೇಕು. ಈಗ ಹಲಸಿನ ಹಣ್ಣಿನ ಚಾಕಲೇಟ್ ಅನ್ನು ಮಕ್ಕಳು ಇಷ್ಟ ಪಟ್ಟು ತಿನ್ನುತ್ತಾರೆ.