ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಸಾಕಷ್ಟು ಫ್ಯಾನ್ ಫಾಲೋವಿಂಗ್ ಇದ್ದರೂ ಧೋನಿ ಒಂದ್ರೀತಿ ಪ್ರೈವೇಟ್ ಪರ್ಸನ್. ಇನ್‌ಸ್ಟಾಗ್ರಾಮ್, ಫೇಸ್ಬುಕ್‌ನಲ್ಲಿ ಅಷ್ಟೇನೂ ಆಕ್ಟಿವ್ ಆಗಿಲ್ಲ. ಇತರ ಕ್ರಿಕೆಟರ್‌ಗಳಂತೆ ರೀಲ್ಸ್, ವಿಡಿಯೋ, ಇತರ ಪೋಸ್ಟ್‌ಗಳನ್ನು ಮಾಹಿ ಹಾಕೋದೇ ಇಲ್ಲ.
ಟೆಕ್ನಾಲಜಿಗೂ ತಮಗೂ ಆಗಿಬರೋದಿಲ್ಲ, ಫೋನ್ ಅನ್ನು ಜಾಸ್ತಿ ಬಳಸೋದಿಲ್ಲ ಅಂತಾ ಖುದ್ದು ಧೋನಿಯೇ ಹೇಳಿದ್ದರು. ನಿವೃತ್ತಿ ನಂತರವೂ ಧೋನಿ ಸಾಮಾಜಿಕ ಜಾಲತಾಣದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ವಿಡಿಯೋ ಒಂದು ಇಂಟರ್ನೆಟ್‌ನಲ್ಲಿ ಈಗ ವೈರಲ್ ಆಗಿದೆ.
ರೋಹಿತ್ ಶರ್ಮಾ, ರಿಷಭ್ ಪಂತ್ ಹಾಗೂ ಸೂರ್ಯಕುಮಾರ್ ಯಾದವ್ ಇನ್‌ಸ್ಟಾಗ್ರಾಮ್‌ನ ಲೈವ್ ಸೆಶನ್ ಒಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ರಿಷಭ್ ಪಂತ್, ಧೋನಿಗೆ ಕರೆ ಮಾಡಿದ್ದಾರೆ. ಧೋನಿ ಪತ್ನಿ ಸಾಕ್ಷಿ ಕರೆಯನ್ನು ಸ್ವೀಕರಿಸಿದ್ರು. ಫೋನ್ ಅನ್ನು ಧೋನಿ ಕಡೆ ತಿರುಗಿಸಿದ್ದಾರೆ, ಮೂವರು ಕ್ರಿಕೆಟರ್‌ಗಳಿಗೆ ಹಾಯ್ ಹೇಳಿದ ಧೋನಿ ಕೂಡಲೇ ಇನ್‌ಸ್ಟಾ ಸೆಶನ್‌ನಿಂದ ಸೈನ್ ಆಫ್ ಆಗಿಬಿಟ್ರು.
ಮತ್ತೊಂದ್ಕಡೆ ಸ್ವಲ್ಪ ಹೊತ್ತು ಲೈವ್‌ನಲ್ಲಿರಿ ಅಂತಾ ಪಂತ್, ಧೋನಿಗೆ ರಿಕ್ವೆಸ್ಟ್ ಮಾಡುತ್ತಿದ್ರು. ಈ ದೃಶ್ಯ ನೋಡಿ ರೋಹಿತ್ ಹಾಗೂ ಸೂರ್ಯಕುಮಾರ್ ನಕ್ಕಿದ್ದಾರೆ. ತಮ್ಮ ಜೂನಿಯರ್‌ಗಳ ಹಾಸ್ಯಪ್ರವೃತ್ತಿ ನೋಡಿ ಧೋನಿಗೂ ನಗು ತಡೆಯಲು ಸಾಧ್ಯವಾಗಿಲ್ಲ. ಮುಗುಳ್ನಗುತ್ತಲೇ ಧೋನಿ ಕ್ಯಾಮರಾ ಆಫ್ ಮಾಡಿಬಿಟ್ರು. ಈ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡ್ತಿದೆ.