ಶಾಸ್ತ್ರಗಳ ಪ್ರಕಾರ ಮನೆಯ ಮುಖ್ಯ ದ್ವಾರಕ್ಕೆ ಬಹಳ ಮಹತ್ವವಿದೆ. ದೇವಾನುದೇವತೆಗಳ ಕೃಪೆಗೊಳಗಾಗಬೇಕಾದಲ್ಲಿ ಮುಖ್ಯ ದ್ವಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಮುಖ್ಯ ದ್ವಾರದಿಂದಲೇ ಧನಾತ್ಮಕ ಶಕ್ತಿಗಳು, ದೇವಾನುದೇವತೆಗಳು ಮನೆಯನ್ನು ಪ್ರವೇಶ ಮಾಡುತ್ತವೆ. ಹಾಗಾಗಿ ಮುಖ್ಯದ್ವಾರದ ಬಳಿ ಕೆಲವೊಂದು ವಸ್ತುಗಳನ್ನು ಇಡಬಾರದು.
ಮುಖ್ಯವಾಗಿ ಮನೆಯ ದ್ವಾರದ ಬಳಿ ಮುಳ್ಳಿನ ಗಿಡಗಳನ್ನು ಇಡಬಾರದು. ಈ ಗಿಡಗಳಲ್ಲಿ ನಕಾರಾತ್ಮಕ ಶಕ್ತಿ ಅಡಗಿರುತ್ತದೆ. ಹಾಗಾಗಿ ಮನೆಯನ್ನು ಧನಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ. ದೇವಾನುದೇವತೆಗಳು ಕೂಡ ಮನೆಯೊಳಗೆ ಬರುವುದಿಲ್ಲ. ಮನೆಯೊಳಗೆ ಬರುವ ವೇಳೆ ಮುಳ್ಳು ಚುಚ್ಚುವ ಸಾಧ್ಯತೆ ಕೂಡ ಇರುತ್ತದೆ.
ಸಾಮಾನ್ಯವಾಗಿ ಮನೆಗೆ ಬಂದ ತಕ್ಷಣ ಎದುರಿಗೆ ಕಾಣುವುದು ಖುರ್ಚಿ. ದಣಿದು ಬಂದವರು ಮನೆಯೊಳಗೆ ಬರ್ತಾ ಇದ್ದಂತೆ ಖುರ್ಚಿ ಮೇಲೆ ಕುಳಿತು ವಿಶ್ರಮಿಸುತ್ತಾರೆ. ಹಾಗಿರುವಾಗ ಮನೆಯ ಮುಖ್ಯ ದ್ವಾರದ ಬಳಿ ಮುರಿದ ಖುರ್ಚಿಗಳನ್ನು ಇಡಬಾರದು. ಇದರ ಮೇಲೆ ಕುಳಿತವರು ಬೀಳುವ ಸಾಧ್ಯತೆ ಇರುತ್ತದೆ. ಶಾಸ್ತ್ರಗಳ ಪ್ರಕಾರ ಮುರಿದ ಖುರ್ಚಿಗಳನ್ನು ಮುಖ್ಯ ದ್ವಾರದ ಬಳಿ ಇಟ್ಟರೆ ಮನೆಯಲ್ಲಿ ಅಶಾಂತಿ ನೆಲೆಸುತ್ತದೆಯಂತೆ. ವಾದ- ವಿವಾದಗಳಾಗುವ ಸಾಧ್ಯತೆ ಇರುತ್ತದೆ. ಜೊತೆಗೆ ಸಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ.
ಅನೇಕರು ಮನೆಯಲ್ಲಿ ಹಾಳಾದ ಪೊರಕೆಯನ್ನು ಎಲ್ಲೋ ಮೂಲೆಯಲ್ಲಿ ಇಟ್ಟಿರುತ್ತಾರೆ. ಇದು ಒಳ್ಳೆಯದಲ್ಲ. ಹಾಳಾದ ಪೊರಕೆ ಮುಖ್ಯ ದ್ವಾರದ ಬಳಿಯಂತೂ ಇರಲೇಬಾರದು. ಹಾಗೆ ಮಾಡಿದರೆ ದೇವಾನುದೇವತೆಗಳು ಮನೆಯೊಳಗೆ ಪ್ರವೇಶ ಮಾಡುವುದಿಲ್ಲ.