alex Certify ಸಂಸ್ಕೃತದಲ್ಲಿ ಐದು ಚಿನ್ನದ ಪದಕಗಳನ್ನು ಗಳಿಸಿದ ಮುಸ್ಲಿಂ ವಿದ್ಯಾರ್ಥಿನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಸ್ಕೃತದಲ್ಲಿ ಐದು ಚಿನ್ನದ ಪದಕಗಳನ್ನು ಗಳಿಸಿದ ಮುಸ್ಲಿಂ ವಿದ್ಯಾರ್ಥಿನಿ

ಲಕ್ನೋ: ಮುಸ್ಲಿಂ ಯುವತಿಯೊಬ್ಬಳು ಎಂಎ ಸಂಸ್ಕೃತದಲ್ಲಿ ಅತ್ಯುತ್ತಮ ವಿದ್ಯಾರ್ಥಿನಿಯಾಗಿ ಐದು ಪದಕಗಳನ್ನು ಗೆದ್ದಿದ್ದಾಳೆ. ನವೆಂಬರ್‌ನಲ್ಲಿ ನಡೆದ ಲಕ್ನೋ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ಗಜಾಲಾ ಅವರ ಹೆಸರನ್ನು ಘೋಷಿಸಲಾಯಿತು.

ಅಧ್ಯಾಪಕರ ಮಟ್ಟದ ಪದಕ ವಿತರಣಾ ಸಮಾರಂಭದಲ್ಲಿ ಕಲಾ ವಿಭಾಗದ ಡೀನ್ ಪ್ರೊ.ಶಶಿ ಶುಕ್ಲಾ ಅವರು ಗಜಾಲಾಗೆ ಪದಕಗಳನ್ನು ಪ್ರದಾನ ಮಾಡಿದರು. ದಿನಗೂಲಿ ಕಾರ್ಮಿಕನ ಮಗಳಾಗಿರುವ ಗಜಾಲಾ ಐದು ಭಾಷೆಗಳಲ್ಲಿ ಪ್ರವೀಣರಾಗಿದ್ದಾರೆ. ಇಂಗ್ಲಿಷ್, ಹಿಂದಿ, ಉರ್ದು, ಅರೇಬಿಕ್ ಮತ್ತು ಸಂಸ್ಕೃತ ಭಾಷೆಯಲ್ಲಿ ಪ್ರಾವಿಣ್ಯತೆಯನ್ನು ಪಡೆದಿದ್ದಾರೆ.

10ನೇ ತರಗತಿಯಲ್ಲಿದ್ದಾಗ ಆಕೆಯ ತಂದೆ ನಿಧನರಾದರು. ಹೀಗಾಗಿ ಗಜಾಲಾ ತನ್ನ ಶಿಕ್ಷಣವನ್ನು ಮುಂದುವರಿಸಲು ಹೆಣಗಾಡಬೇಕಾಯಿತು. ಆದರೆ ಈಕೆಯ ಸಹೋದರರು ಮಾಡಿರುವ ತ್ಯಾಗವನ್ನು ನೆನೆದಿದ್ದಾಳೆ. ಸಹೋದರರಾದ ಶಾದಾಬ್ ಮತ್ತು ನಯಾಬ್ ಅವರು ಶಾಲೆಯನ್ನು ತೊರೆದು ತಮ್ಮ 13 ಮತ್ತು 10ನೇ ವಯಸ್ಸಿನಲ್ಲಿ ಗ್ಯಾರೇಜ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ರು. ಇದರಿಂದ ಗಜಾಲಾ ತನ್ನ ಅಧ್ಯಯನವನ್ನು ಮುಂದುವರಿಸಿದ್ರು.

ಇನ್ನು ಗಜಾಲಾ ಅವರ ಹಿರಿಯ ಸಹೋದರಿ ಯಾಸ್ಮೀನ್ ಕೂಡ ಪಾತ್ರೆಗಳ ಅಂಗಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ರು. ಆಕೆಯ ತಾಯಿ ನಸ್ರೀನ್ ಬಾನೋ ಅವರು ಮನೆಯನ್ನು ನೋಡಿಕೊಳ್ಳುತ್ತಿದ್ದರು. ಗಜಾಲಾ ತನ್ನ ಕುಟುಂಬದೊಂದಿಗೆ ಒಂದು ಕೋಣೆಯ ಪುಟ್ಟ ಮನೆಯಲ್ಲಿ ವಾಸಿಸುತ್ತಾರೆ. ನಮಾಜ್ ಮಾಡಲು ಬೆಳಿಗ್ಗೆ 5 ಗಂಟೆಗೆ ಎದ್ದೇಳುವ ಅವರು, ಎಲ್ಲಾ ಮನೆಗೆಲಸಗಳನ್ನು ಮಾಡುತ್ತಾರೆ. ಹಾಗೂ ದಿನಕ್ಕೆ ಸುಮಾರು ಏಳು ಗಂಟೆಗಳ ಕಾಲ ಸಂಸ್ಕೃತವನ್ನು ಅಧ್ಯಯನ ಮಾಡುತ್ತಾರೆ. ಆಕೆ ತಾನು ಸಂಸ್ಕೃತ ಪ್ರಾಧ್ಯಾಪಕಿಯಾಗಬೇಕೆಂಬ ಹಂಬಲವನ್ನು ಹೊಂದಿದ್ದಾರೆ.

ಗಜಾಲಾ ನಿಶಾತ್‌ಗಂಜ್‌ನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಸಂಸ್ಕೃತದತ್ತ ವಿಶೇಷ ಆಸಕ್ತಿ ಬೆಳೆಯಿತು ಎಂದು ಹೇಳಿದ್ದಾರೆ. ಆಕೆ 5ನೇ ತರಗತಿಯಲ್ಲಿರುವಾಗ ಶಿಕ್ಷಕರು ಸಂಸ್ಕೃತವನ್ನು ಕಲಿಸಿದ್ದಾರೆ. ಇದೀಗ ಗಜಾಲಾ ವೈದಿಕ ಸಾಹಿತ್ಯದಲ್ಲಿ ಪಿಎಚ್‌ಡಿ ಮಾಡಲು ಬಯಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...