ದೆಹಲಿ: ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಲೋಕಸಭೆಯಲ್ಲಿ ಗಂಭೀರವಾದ ಕಲಾಪಗಳ ನಡುವೆ ನಟ ಕಮ್ ಸಂಸದ ಸುರೇಶ್ ಗೋಪಿ ಅವರ ಗಡ್ಡದ ಬಗ್ಗೆ ಪ್ರಶ್ನೆಯನ್ನು ಎತ್ತುವ ಮೂಲಕ ನಗುವಿನ ಕ್ಷಣವನ್ನು ಮೂಡಿಸಿದ್ದಾರೆ.
ಕೇರಳದ ಬಿಜೆಪಿ ಸಂಸದ ಗೋಪಿ ತಮ್ಮ ಭಾಷಣವನ್ನು ಮಂಡಿಸಲು ಎದ್ದು ನಿಂತಾಗ, ಅವರ ಗಡ್ಡವನ್ನು ನೋಡಿ ಸದನದ ಅಧ್ಯಕ್ಷರೂ ಆಗಿರುವ ನಾಯ್ಡು ಅವರು ಆಶ್ಚರ್ಯಚಕಿತರಾಗಿದ್ದಾರೆ. ನಂತರ ಅವರು ಇದು ಮುಖವಾಡವೇ ಅಥವಾ ಗಡ್ಡವೇ? ಎಂದು ಪ್ರಶ್ನಿಸಿದ್ದಾರೆ. ಇದು ಸದನದಲ್ಲಿದ್ದವರನ್ನೆಲ್ಲಾ ನಗೆಗಡಲಲ್ಲಿ ತೇಲಿಸಿದೆ. ಇದು ಚಲನಚಿತ್ರಕ್ಕಾಗಿ ಹೊಸ ನೋಟ ಎಂದು ಗೋಪಿ ವಿವರಿಸಿದ್ದಾರೆ.
ಕಳೆದ ಬಾರಿ ಮೆಕಾಲೆ ಶಿಕ್ಷಣ ಪದ್ಧತಿಯನ್ನು ದೇಶದಿಂದ ಸಂಪೂರ್ಣವಾಗಿ ತಿರಸ್ಕರಿಸುವಂತೆ ಕರೆ ನೀಡಿದಾಗ ಉಪ ರಾಷ್ಟ್ರಪತಿ ಸುದ್ದಿಯಲ್ಲಿದ್ದರು. ಶಿಕ್ಷಣ ವ್ಯವಸ್ಥೆಯ ಭಾರತೀಕರಣವು ದೇಶದ ಹೊಸ ಶಿಕ್ಷಣ ನೀತಿಗೆ ಕೇಂದ್ರವಾಗಿದೆ. ಇದು ಮಾತೃಭಾಷೆಗಳ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಎಂದು ನಾಯ್ಡು ಹೇಳಿದ್ದಾರೆ. ಅನ್ಯಭಾಷೆಯನ್ನು ನಮ್ಮ ಶಿಕ್ಷಣ ಮಾಧ್ಯಮವಾಗಿ ಹೇರುವುದರಿಂದ ಶಿಕ್ಷಣವನ್ನು ಸಮಾಜದ ಒಂದು ಸಣ್ಣ ವರ್ಗಕ್ಕೆ ಸೀಮಿತಗೊಳಿಸಿ, ಅಪಾರ ಜನಸಂಖ್ಯೆಯ ಶಿಕ್ಷಣದ ಹಕ್ಕನ್ನು ಕಸಿದುಕೊಂಡಿದೆ ಎಂದು ಅವರು ಹೇಳಿದ್ದಾರೆ.