ಪಶ್ಚಿಮ ಬಂಗಾಳದಲ್ಲಿ ಸಂಸದರೊಬ್ಬರ ಕಾರಿಗೆ ಡಿಕ್ಕಿ ಹೊಡೆದು ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ಕಾರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ನ ಮುರ್ಷಿದಾಬಾದ್ ಸಂಸದ ಅಬು ತಾಹೆರ್ ಖಾನ್ ಅವರಿಗೆ ಸೇರಿದೆ.
ತಕ್ಷಣ ಸಂಸದ ಅಬು ತಾಹೆರ್ ಖಾನ್ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ಚಿಕಿತ್ಸೆ ವೇಳೆ ಮಗು ಸಾವನ್ನಪ್ಪಿದೆ.
ಮಗು ಇದ್ದಕ್ಕಿದ್ದಂತೆ ನಮ್ಮ ವಾಹನದ ಮುಂದೆ ಬಂದಿತು. ಚಿಕ್ಕ ಮಗು, ಅವನಿಗೆ ಐದು ಅಥವಾ ಆರು ವರ್ಷ. ನಾವು ಅವನನ್ನು ಆಸ್ಪತ್ರೆಗೆ ಸೇರಿಸಿದೆವು. ಇದು ನನ್ನ ಮುಂದೆ ಸಂಭವಿಸಿತು. ಬಹುಶಃ ಮಗು ಮಿದುಳಿನ ಗಾಯದಿಂದ ಬಳಲುತ್ತಿತ್ತು ಎಂದು ಅಬು ತಾಹೆರ್ ಖಾನ್ ಆಸ್ಪತ್ರೆಯ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
ಮಗುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾದ ಮಗುವಿನ ಪೋಷಕರು ವೈದ್ಯರ ಮುಂದೆ ಗೋಳಾಡಿದರು.