alex Certify ಸಂಸತ್ ನಲ್ಲಿ ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ವಿಧೇಯಕ ಮಂಡಿಸಿದ ಸಚಿವೆ ಇರಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಸತ್ ನಲ್ಲಿ ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ವಿಧೇಯಕ ಮಂಡಿಸಿದ ಸಚಿವೆ ಇರಾನಿ

ನವದೆಹಲಿ: ದೇಶದಲ್ಲಿನ ಮಹಿಳೆಯರ ಮದುವೆ ವಯಸ್ಸನ್ನು 18 ರಿಂದ 21ಕ್ಕೆ ಏರಿಸುವ ಬಾಲ್ಯ ವಿವಾಹ ನಿಷೇಧ(ತಿದ್ದುಪಡಿ) ವಿಧೇಯಕವನ್ನು ಸಂಸತ್ ನಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮಂಡಿಸಿದ್ದಾರೆ. ಇದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

ಈ ವಿಧೇಯಕವು ದೇಶದಲ್ಲಿ ಮಹಿಳೆಯರ ಮದುವೆ ವಯಸ್ಸನ್ನು 18 ರಿಂದ 21ಕ್ಕೆ ಏರಿಸುವ ಉದ್ಧೇಶ ಹೊಂದಿದೆ. ಸಂಸದರಾದ ಅಸಾದುದ್ದೀನ್ ಒವೈಸಿ, ಸುಪ್ರಿಯಾ ಸುಳೆ, ರಂಜನ್ ಚೌಧರಿ ಸೇರಿದಂತೆ ಹಲವರು ತೀವ್ರವಾಗಿ ಈ ವಿಧೇಯಕವನ್ನು ಖಂಡಿಸಿದ್ದಾರೆ.

ವಿಧೇಯಕ ಮಂಡಿಸಿ ಮಾತನಾಡಿದ ಸಚಿವೆ, ದೇಶದಲ್ಲಿ ಮಹಿಳಾ ಸಮಾನತೆ ತರುವ ಅವಶ್ಯಕತೆ ಇರುವುದರಿಂದಾಗಿ ಈ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದೆ. ವಿವಾಹ ಸಂಬಂಧದಲ್ಲಿ ಕೂಡ ಮಹಿಳೆಗೂ ಸಮಾನ ಹಕ್ಕುಗಳನ್ನು ನೀಡುವ ಅಗತ್ಯವಿದೆ. ದೇಶದಲ್ಲಿನ ಬೇರೆ ಬೇರೆ ನಂಬಿಕೆಗಳ ವಿವಾಹ ಕಾನೂನುಗಳನ್ನು ಕ್ರೂಢೀಕರಿಸಿ ತಿದ್ದುಪಡಿ ವಿಧೇಯಕ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಧೇಯಕ ಆಕ್ರಮಣಕಾರಿಯಾಗಿದೆ. ಪ್ರತಿ ಪಕ್ಷಗಳ ಸಲಹೆ ಆಲಿಸದೆ ಈ ಮಸೂದೆ ಜಾರಿಗೊಳಿಸಲಾಗುತ್ತಿದೆ ಎಂದು ಎನ್ ಸಿ ಪಿ ಸಂಸದೆ ಸುಪ್ರಿಯಾ ಸುಳೆ ಆರೋಪಿಸಿದರು. ಪ್ರತಿಪಕ್ಷಗಳ ಹಲವು ನಾಯಕರು ಈ ಕಾಯ್ದೆ ವಿರುದ್ಧ ಮಾತನಾಡಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...