ಸಂಧಿವಾತವು ದೀರ್ಘಕಾಲ ಕಾಡುವಂತಹ ಸಮಸ್ಯೆ. ತೀವ್ರವಾದ ಉರಿಯೂತ ಮತ್ತು ನೋವನ್ನು ಇದು ಉಂಟುಮಾಡುತ್ತದೆ. ಸಂಧಿವಾತದಿಂದ ಬಳಲುತ್ತಿರುವವರು ಸಾಕಷ್ಟು ನೋವು ಮತ್ತು ತೊಂದರೆಯನ್ನು ಅನುಭವಿಸುತ್ತಾರೆ. ಈ ಸಮಸ್ಯೆಯನ್ನು ಹಲವು ವಿಧಗಳಲ್ಲಿ ನಿವಾರಿಸಬಹುದು, ಅವುಗಳಲ್ಲಿ ಒಂದು ಅರಿಶಿನದ ಬಳಕೆ.
ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಪದಾರ್ಥಗಳಲ್ಲಿ ಅರಿಶಿನ ಪುಡಿ ಕೂಡ ಒಂದು. ಆಹಾರಕ್ಕೆ ಪರಿಮಳ, ರುಚಿ ಕೊಡುವ ಜೊತೆಗೆ ಅರಿಶಿನವು ಕೆಲವು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ದೈನಂದಿನ ಆಹಾರದಲ್ಲಿ ಅರಿಶಿನವನ್ನು ಸೇರಿಸುವುದರಿಂದ ಕೀಲು ನೋವು ಮತ್ತು ಊತವನ್ನು ಕಡಿಮೆ ಮಾಡಬಹುದು.
ಅರಿಶಿನದಲ್ಲಿ ಕರ್ಕ್ಯುಮಿನ್ ಇದೆ. ಇದು ಉರಿಯೂತದ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿರುವ ರಾಸಾಯನಿಕ ಸಂಯುಕ್ತವಾಗಿದೆ ಮತ್ತು ಕೆಲವು ದೀರ್ಘಕಾಲದ ಆರೋಗ್ಯ ತೊಂದರೆಗಳನ್ನು ಇದು ಗುಣಪಡಿಸಬಲ್ಲದು. ಸಂಧಿವಾತದ ಲಕ್ಷಣಗಳೇನು ? ಅದರಿಂದ ಪರಿಹಾರ ಪಡೆಯಲು ಅರಿಶಿನವನ್ನು ಯಾವ ರೀತಿ ಬಳಸಬೇಕು ಎಂಬುದನ್ನು ನೋಡೋಣ.
ಸಂಧಿವಾತದ ಲಕ್ಷಣಗಳು
ನೋವು
ಬಿಗಿತ
ಊತ
ಕೆಂಪು ಬಣ್ಣಕ್ಕೆ ತಿರುಗುವುದು
ನಡೆಯಲು ಅಸಾಧ್ಯ
ಸಂಧಿವಾತ ರೋಗಿಗಳಿಗೆ ಅರಿಶಿನದ ಲಾಭ
ಸಂಧಿವಾತದ ಲಕ್ಷಣಗಳನ್ನು ಕಡಿಮೆ ಮಾಡಲು ಕರ್ಕ್ಯುಮಿನ್ ಹಲವಾರು ವಿಧಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಕರ್ಕ್ಯುಮಿನ್ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಇದು ಉರಿಯೂತದ ಏಜೆಂಟ್ಇದ್ದಂತೆ. ನಮ್ಮ ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚಿಸಬಲ್ಲದು.
ನಿಮ್ಮ ಆಹಾರದಲ್ಲಿ ಮಸಾಲೆಯಾಗಿ ಅರಿಶಿನವನ್ನು ಸೇರಿಸಿ. ಅಥವಾ ಬೆಳಗ್ಗೆ ಅರಿಶಿನದ ಕಷಾಯ ಮಾಡಿಕೊಂಡು ಕುಡಿಯಬಹುದು. ಇಲ್ಲವೇ ಪೂರಕವಾಗಿ ತೆಗೆದುಕೊಳ್ಳಿ. ರಾತ್ರಿ ಮಲಗುವ ಮುನ್ನ ಹಾಲಿನಲ್ಲಿ ಅರಿಶಿನವನ್ನು ಮಿಶ್ರಣ ಮಾಡಿಕೊಂಡು ಕುಡಿಯಿರಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಇಂಚು ಹಸಿ ಅರಿಶಿನ ಬೇರನ್ನು ಬೆಲ್ಲದೊಂದಿಗೆ ಕೂಡ ಸೇವಿಸಬಹುದು. ಇಲ್ಲವೇ ಅದನ್ನು ಸ್ಮೂಥಿಗಳಿಗೆ ಸೇರಿಸಿಕೊಂಡು ಸೇವನೆ ಮಾಡಬಹುದು.