ಸಂದರ್ಶನದಲ್ಲಿ ವಯಸ್ಸು ಮತ್ತು ಲಿಂಗ ತಾರತಮ್ಯ ಮಾಡಿದ್ದಕ್ಕಾಗಿ ಮಹಿಳೆಯೊಬ್ಬಳು ಡೊಮಿನೋಸ್ ವಿರುದ್ಧ ಕಾನೂನು ಹೋರಾಟ ಮಾಡಿ ಗೆದ್ದಿದ್ದಾಳೆ. ಉತ್ತರ ಐರ್ಲೆಂಡ್‌ನ ಜಾನಿಸ್ ವಾಲ್ಷ್ ಕೌಂಟಿ ಟೈರೋನ್‌ನ ಸ್ಟ್ರಾಬೇನ್‌ನಲ್ಲಿರುವ ಡೊಮಿನೋಸ್ ಔಟ್‌ಲೆಟ್‌ನಲ್ಲಿ ಡೆಲಿವರಿ ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಳು. ಸಂದರ್ಶನದ ಆರಂಭದಲ್ಲಿ, ಅವಳ ವಯಸ್ಸನ್ನು ಕೇಳಲಾಯಿತು. ಸಂದರ್ಶಕ ಆಕೆಯ ಉತ್ತರವನ್ನ ವಿಶೇಷವಾಗಿ ಮಾರ್ಕ್ ಮಾಡಿದ್ದನ್ನ ಜಾನಿಸ್ ಗಮನಿಸಿದ್ದಾಳೆ.
ಉದ್ಯೋಗಕ್ಕೂ ತನ್ನ ವಯಸ್ಸಿಗೂ ಸಂಬಂಧ ಕಲ್ಪಿಸ್ತಾ ಇರೋದು ಜಾನಿಸ್‌ಗೆ ಇಷ್ಟವಾಗಲಿದೆ. ಕೂಡಲೇ ಅವಳು ಡಾಮಿನೋಸ್ ಔಟ್ಲೆಟ್ ವಿರುದ್ಧ ಮೊಕದ್ದಮೆ ಹೂಡಿದ್ದಾಳೆ. ನ್ಯಾಯಾಲಯದಲ್ಲಿ ಜಾನಿಸ್‌ಗೆ ಜಯ ಸಿಕ್ಕಿದ್ದು, 4000 ಡಾಲರ್ ಅಂದ್ರೆ 3,78,112 ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಡೊಮಿನೋಸ್‌ಗೆ ಸೂಚಿಸಿದೆ. ತನ್ನ ವಯಸ್ಸು ಸಂದರ್ಶನ ಸಮಿತಿಯ ನಿರ್ಧಾರದ ಮೇಲೆ ಪರಿಣಾಮ ಬೀರಿರುವುದು ದುರದೃಷ್ಟಕರ ಎನ್ನುತ್ತಾಳೆ ಈ ಮಹಿಳೆ. ಫೇಸ್‌ಬುಕ್ ಮೂಲಕ ಶಾಖೆಯನ್ನು ಸಂಪರ್ಕಿಸಿ, ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.
ಸ್ವಲ್ಪ ಸಮಯದ ನಂತರ ಸಂದರ್ಶನ ಸಮಿತಿಯ ಸದಸ್ಯರೊಬ್ಬರು ಅವಳನ್ನು ಸಂಪರ್ಕಿಸಿ, ಒಬ್ಬ ವ್ಯಕ್ತಿಯ ವಯಸ್ಸನ್ನು ಕೇಳುವುದು ಸೂಕ್ತವಲ್ಲ ಎಂಬುದು ಅವರಿಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಜಾನಿಸ್ ಅರ್ಜಿ ಸಲ್ಲಿಸಿದ ಉದ್ಯೋಗ 18 ಮತ್ತು 30ರ ನಡುವಿನವರಿಗೆ ಸರಿಹೊಂದುತ್ತದೆ ಎಂದು ಔಟ್ಲೆಟ್ನಲ್ಲಿ ಇನ್ನೊಬ್ಬ ಉದ್ಯೋಗಿ ಹೇಳಿದ್ದನ್ನು ಕೇಳಿದ್ದಾಳೆ. ನಾನು ಒಬ್ಬ ಮಹಿಳೆ ಎಂಬ ಕಾರಣದಿಂದ ಡ್ರೈವರ್ ಹುದ್ದೆಗೆ ನನ್ನನ್ನು ಕಡೆಗಣಿಸಲಾಗಿದೆ ಅನ್ನೋದು ಆಕೆಗೆ ಖಚಿತವಾಗಿತ್ತು.
ಯಾಕಂದ್ರೆ ಆಕೆಯನ್ನು ಸಂದರ್ಶಿಸಿದ ನಂತರವೂ ಡೊಮಿನೋಸ್ ಡ್ರೈವರ್ ಬೇಕೆಂಬ ಜಾಹೀರಾತು ನೀಡುವುದನ್ನು ಮುಂದುವರಿಸಿತ್ತು. ಇದರಿಂದ ನೊಂದ ಮಹಿಳೆ ಡೊಮಿನೋಸ್ ವಿರುದ್ಧ ಮೊಕದ್ದಮೆ ಹೂಡಿದ್ದಾಳೆ. ಕಾನೂನು ಸಮರದಲ್ಲಿ ಜಯಗಳಿಸಿದ್ದಾಳೆ.