ಲಕ್ನೋ- ಪೊಲೀಸರು ಯಾವ ರೀತಿ ಕೆಲಸ ಮಾಡ್ತಾರೆ ಅನ್ನೋದನ್ನ ಪರಿಶೀಲನೆ ಮಾಡಲು ಇಲ್ಲೊಬ್ಬರು ಐಪಿಎಸ್ ಅಧಿಕಾರಿ ತಾವೇ ಸಂತ್ರಸ್ತೆಯ ವೇಷ ತೊಟ್ಟಿದ್ದಾರೆ. ಈ ಘಟನೆ ನಡೆದಿರೋದು ಲಕ್ನೋದ ಔರೈಯಾ ಜಿಲ್ಲೆಯಲ್ಲಿ. ಇಲ್ಲಿನ ಐಪಿಎಸ್ ಅಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರಾಗಿರುವ ಚಾರು ನಿಗಮ್ ಅವರು ಈ ಕೆಲಸ ಮಾಡಿದ್ದಾರೆ.
ಹೌದು, ಇಲ್ಲಿನ ಪೊಲೀಸರ ಕೆಲಸ ಹೇಗಿದೆ. ಅವರು ಜನಸಾಮಾನ್ಯರಿಗೆ ಯಾವ ರೀತಿ ಸ್ಪಂದಿಸುತ್ತಾರೆ ಅನ್ನೋದನ್ನ ನೋಡಲು ಖುದ್ದು ಫೀಲ್ಡ್ ಗೆ ಇಳಿದಿದ್ದಾರೆ. ಯಾರೋ ತಮ್ಮ ಗಾಡಿಯನ್ನು ಫಾಲೋ ಮಾಡಿದ್ದಾರೆ ಅಂತ 112ಗೆ ಕರೆ ಮಾಡಿದ್ದಾರೆ. ತಮ್ಮ ಹೆಸರು ಬದಲಾಯಿಸುಕೊಂಡು ಮಾತಾಡಿದ್ದಾರೆ. ದರೋಡೆಕೋರರು ನನ್ನನ್ನು ಹಿಂಬಾಲಿಸಿಕೊಂಡು ಬಂದು ದರೋಡೆ ಮಾಡಿದ್ದಾರೆ ಎಂದು ಕರೆ ಮಾಡಿದ್ದಾರೆ.
ಇವರ ಕರೆಗೆ ಸ್ಪಂದಿಸಿದ ಮೂವರು ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಈ ಘಟನೆ ಸಂಬಂಧ ದೂರು ನೀಡಿದ ಮಹಿಳೆಯನ್ನು ವಿಚಾರಣೆ ನಡೆಸಿದ್ದಾರೆ. ಜೊತೆಗೆ ವಾಹನವನ್ನೂ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮಹಿಳೆ ಐಪಿಎಸ್ ಅಧಿಕಾರಿ ಎಂದು ಗೊತ್ತಾಗಿಲ್ಲ. ಸುಮಾರು ಒಂದು ಗಂಟೆಗಳ ಬಳಿಕ ಹಿರಿಯ ಅಧಿಕಾರಿ ಎಂಬುದು ಗೊತ್ತಾಗಿದೆ. ಈ ವಿಚಾರ ಗೊತ್ತಾಗ್ತಾ ಇದ್ದಂತೆ ಸ್ಥಳೀಯ ಪೊಲೀಸರ ತಂಡ ಶಾಕ್ ಆಗಿದೆ. ಇನ್ನು ಪೊಲೀಸರ ಕಾರ್ಯಕ್ಷಮತೆಗೆ ಹಿರಿಯ ಅಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.