alex Certify ಸಂತೋಷ್​ ಪಾಟೀಲ್​ ಪ್ರಕರಣಕ್ಕೆ ತನಿಖಾ ಚಾಣಾಕ್ಷ ಎಡಿಜಿಪಿ ಪ್ರತಾಪ್​ ರೆಡ್ಡಿ ಎಂಟ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂತೋಷ್​ ಪಾಟೀಲ್​ ಪ್ರಕರಣಕ್ಕೆ ತನಿಖಾ ಚಾಣಾಕ್ಷ ಎಡಿಜಿಪಿ ಪ್ರತಾಪ್​ ರೆಡ್ಡಿ ಎಂಟ್ರಿ

ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣಕ್ಕೆ ಎಡಿಜಿಪಿ ಪ್ರತಾಪ್​ ರೆಡ್ಡಿ ಎಂಟ್ರಿ ಕೊಟ್ಟಿದ್ದು ತನಿಖೆಯ ಹಾದಿ ಇನ್ನಷ್ಟು ಚುರುಕುಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಎಡಿಜಿಪಿ ಪ್ರತಾಪ್​ ರೆಡ್ಡಿ ಬೆಳಗ್ಗೆ 8 ಗಂಟೆಯಿಂದ ಉಡುಪಿ ಪೊಲೀಸ್​ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸತತ ನಾಲ್ಕು ಗಂಟೆಗಳಿಂದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ, ಡಿವೈಎಸ್ಪಿ ಹಾಗೂ 5 ತನಿಖಾ ತಂಡಗಳ ಜೊತೆಯಲ್ಲಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣವನ್ನು ಐದು ಆಯಾಮಗಳಲ್ಲಿ ಮುನ್ನಡೆಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ತನಿಖೆ ನಡೆಸುವಲ್ಲಿ ಅತ್ಯಂತ ಚಾಣಾಕ್ಷ ಅಧಿಕಾರಿ ಎಂದು ಹೆಸರು ಪಡೆದಿರುವ ಪ್ರತಾಪ್​ ರೆಡ್ಡಿ ಈಗಾಗಲೇ ಅನೇಕ ಜಟಿಲ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರ್​.ಎನ್.​ ನಾಯಕ್​ ಕೊಲೆ ಪ್ರಕರಣ, ಮಣಿಪಾಲ ರೇಪ್​ ಪ್ರಕರಣ ಸೇರಿದಂತೆ ಹಲವು ಜಟಿಲ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಕಂಬಿ ಹಿಂದೆ ಅಟ್ಟುವಲ್ಲಿ ಪ್ರತಾಪ್ ರೆಡ್ಡಿ ಯಶಸ್ವಿಯಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...