ಮನೆಯ ಮುಖ್ಯದ್ವಾರ ಬಹಳ ಮಹತ್ವವನ್ನು ಪಡೆದಿದೆ. ಮನೆಯ ಮುಖ್ಯದ್ವಾರದ ಮೂಲಕವೇ ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ.
ಮನೆಯನ್ನು ಸದಾ ಸಕಾರಾತ್ಮಕ ಶಕ್ತಿ ಪ್ರವೇಶ ಮಾಡಬೇಕೆನ್ನುವವರು,ಪ್ರತಿ ದಿನ ಬೆಳಿಗ್ಗೆ ಎದ್ದ ತಕ್ಷಣ ಕೆಲವೊಂದು ಮುಖ್ಯವಾದ ಕೆಲಸ ಮಾಡಬೇಕು.
ಮುಖ್ಯದ್ವಾರಕ್ಕೆ ರಂಗೋಲಿ ಇಡುವ ಮೂಲಕ ನೀವು ನಕಾರಾತ್ಮಕ ಶಕ್ತಿ ಪ್ರವೇಶವನ್ನು ತಡೆಯಬಹುದು. ತಾಯಿ ಆಶೀರ್ವಾದವೂ ಇದ್ರಿಂದ ಲಭಿಸುತ್ತದೆ. ಪ್ರತಿ ದಿನ ಬೆಳಿಗ್ಗೆ ರಂಗೋಲಿ ಹಾಕಲು ಸಮಯವಿದ್ದರೆ ನೀವು ರಂಗೋಲಿ ಹಾಕಬೇಕು. ಸಮಯವಿಲ್ಲ ಎನ್ನುವವರು ವಾರಕ್ಕೆ ಒಮ್ಮೆಯಾದ್ರೂ ರಂಗೋಲಿ ಹಾಕಬೇಕು. ರಂಗೋಲಿ, ಲಕ್ಷ್ಮಿಯನ್ನು ಸಂಪನ್ನಗೊಳಿಸುತ್ತದೆ.
ವಾಸ್ತು ಪ್ರಕಾರ, ಬೆಳಿಗ್ಗೆ ಎದ್ದ ನಂತರ ದೇವರಿಗೆ ನಮಸ್ಕರಿಸಬೇಕು. ನಂತ್ರ ಮುಖ್ಯ ದ್ವಾರದ ಹೊರಭಾಗವನ್ನು ನೀರಿನಿಂದ ತೊಳೆಯಬೇಕು. ನೀರಿಗೆ ಸ್ವಲ್ಪ ಅರಿಶಿನ ಬೆರೆಸಿ ತೊಳೆಯಬಹುದು. ಹೀಗೆ ಮಾಡಿದರೆ, ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಎಂದೂ ಕಾಡುವುದಿಲ್ಲ.
ಮನೆಗೆ ಸಮೃದ್ಧಿ ಬಯಸುವವರು ಓಂ, ಶ್ರೀ ಗಣೇಶ ಅಥವಾ ತಾಯಿ ಲಕ್ಷ್ಮಿಯ ಚಿಹ್ನೆಗಳು ಮತ್ತು ಮಂಗಳಕರ ಚಿಹ್ನೆಗಳನ್ನು ಮುಖ್ಯ ಬಾಗಿಲಿಗೆ ಹಾಕಬೇಕು. ಹೀಗೆ ಮಾಡಿದಲ್ಲಿ ಧನಾತ್ಮಕ ಶಕ್ತಿಗಳು ಯಾವಾಗಲೂ ಮನೆಯಲ್ಲಿ ಪ್ರವೇಶಿಸುತ್ತವೆ. ನಕಾರಾತ್ಮಕ ಶಕ್ತಿ ಮನೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.
ವಾಸ್ತು ಶಾಸ್ತ್ರದ ಪ್ರಕಾರ ತೋರಣ ಹಾಕುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ತೋರಣವನ್ನು ಮಾವು ಅಥವಾ ಅಶೋಕ ಎಲೆಗಳಿಂದ ತಯಾರಿಸಬಹುದು. ಇದು ಮನೆಯ ಸಂತೋಷ, ಸಮೃದ್ಧಿಗೆ ಕಾರಣವಾಗುತ್ತದೆ.
ಪ್ರತಿನಿತ್ಯ ಸ್ನಾನ ಮಾಡಿದ ನಂತರ ಮನೆಯ ಮುಖ್ಯದ್ವಾರದ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಹಾಕಬೇಕು. ಇದು ರೋಗವನ್ನು ದೂರ ಮಾಡುತ್ತದೆ. ಆರ್ಥಿಕ ಸಮಸ್ಯೆ ದೂರ ಮಾಡಿ, ಮನೆಯಲ್ಲಿ ಸಂತೋಷ ನೆಲೆಸಲು ಕಾರಣವಾಗುತ್ತದೆ.