ನಟ ದರ್ಶನ್ ಹೆಸರಲ್ಲಿ ವಂಚನೆ ಯತ್ನ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಬೆಂಗಳೂರಿನಲ್ಲಿಂದು ಮತ್ತೊಮ್ಮೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿರ್ಮಾಪಕ ಉಮಾಪತಿ ದರ್ಶನ್ ಸ್ನೇಹಿತರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಾನು ದಡ್ಡ ಒಪ್ಪಿಕೊಳ್ತೇನೆ. ಆದರೆ 25 ಕೋಟಿ ರೂಪಾಯಿ ವ್ಯವಹಾರದಲ್ಲಿ ನೀವು ಹೇಗೆ ಯಾಮಾರಿದ್ರಿ..?ನಿಮಗೆ ಇದರ ಬಗ್ಗೆ ಅನುಮಾನ ಮೂಡಲೇ ಇಲ್ಲವಾ..? ಇಷ್ಟು ದಿನ ಕಳೆದರೂ ಮಲ್ಲೇಶ್ರನ್ನ ನೀವೇಕೆ ಟ್ರೇಸ್ ಮಾಡಲಿಲ್ಲ..? ಅರುಣಾ ಕುಮಾರಿಯನ್ನ ನೀವೇಕೆ ಬಿಟ್ಟು ಕಳಿಸಿದ್ದೀರಿ..? ಎಂದು ಪ್ರಶ್ನೆ ಮಾಡಿದ್ದಾರೆ.
ನನಗೆ ನಮ್ಮ ಪೊಲೀಸ್ ಮೇಲೆ ನಂಬಿಕೆ ಇದೆ. ದರ್ಶನ್ ಹಾಗೂ ನನ್ನ ನಡುವೆ ತಂದಿಡುವ ಕೆಲಸ ಮಾಡಲಾಗ್ತಾ ಇದೆ. ಅರುಣಾ ಕುಮಾರಿ ಹರ್ಷ ಮೆಲಂಟಾ ಜೊತೆ ಮಾತನಾಡುತ್ತಾಳೆ. ನನ್ನ ಹಾಗೂ ದರ್ಶನ್ ಜೊತೆ ಏಕೆ ಮಾತನಾಡೋದಿಲ್ಲ..? ಬೆಂಗಳೂರು ಪೊಲೀಸರ ಮೇಲೆ ರಾಕೇಶ್ ಪಾಪಣ್ಣಗೆ ನಂಬಿಕೆ ಇಲ್ಲವಂತೆ. ಹೀಗಾಗಿ ಮೈಸೂರಿನಲ್ಲಿ ದೂರು ನೀಡಿದ್ದಾರಂತೆ. ಸಂತೆಯಲ್ಲಿ ಸೀರೆ ಬಿಚ್ಚಿಸಿ ಆಗಿದೆ. ಇನ್ನು ಮರ್ಯಾದೆ ಉಳಿಯೋದು ಏನಿಲ್ಲ. ಈ ಪ್ರಕರಣ ಇಷ್ಟು ಬಹಿರಂಗವಾದ ಮೇಲೆ ಕಾನೂನಿನ ಅಡಿಯಲ್ಲೇ ಪರಿಹಾರ ಹುಡುಕೋಣ. ಈ ಪ್ರಕರಣದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದ್ರು.
ನನಗೆ ಏಪ್ರಿಲ್ನಿಂದಲೇ ಅರುಣಾಕುಮಾರಿಯ ಪರಿಚಯವಾಗಿತ್ತು. ಪ್ರಾಪರ್ಟಿ ವಿಚಾರವಾಗಿ ಆಕೆಯ ಪರಿಚಯವಾಗಿತ್ತು. ದರ್ಶನ್ ಸರ್ ಹೆಸರು ಕೇಳಿದ್ದರಿಂದ ನಾನು ಆಧಾರ್ ಕಾರ್ಡ್ ಫೋಟೋ ಕಳಿಸಿದ್ದೆ. ನನ್ನ ಮೇಲೆ ಆರೋಪ ಬಂದಿದೆ ನಾನು ಸಾಬೀತು ಮಾಡಲೇಬೇಕು ಎಂದು ಹೇಳಿದ್ರು. ದರ್ಶನ್ ಮಾಡಿದ ಪಾರ್ಟಿಗೆ ನನ್ನ ಕಾರನ್ನೇ ಒಳ ಹೋಗಲು ಬಿಟ್ಟಿಲ್ಲ. ಅಂದಮೇಲೆ ಲಾಕ್ಡೌನ್ ಸಂದರ್ಭದಲ್ಲಿ ಅರುಣಾ ಕುಮಾರಿಗೆ ಹೇಗೆ ಅನುಮತಿ ನೀಡಿದರು..? ನಾನು ಬುದ್ಧಿವಂತನಲ್ಲ.. ನಾನು ದಡ್ಡ. ಒಪ್ಪಿಕೊಳ್ತೇನೆ. ಆದರೆ ನೀವು ಬುದ್ಧಿವಂತರಲ್ವಾ ನೀವು ಹೇಗೆ ಯಾಮಾರಿದ್ರಿ ಎಂದು ಪ್ರಶ್ನೆ ಮಾಡಿದ್ದಾರೆ.