ಸಂಜೆ ಟೀ ಜತೆ ಏನಾದರೂ ತಿನ್ನಬೇಕು ಅನಿಸುತ್ತದೆ. ಹಾಗಾದ್ರೆ ತಡವೇಕೆ ಮನೆಯಲ್ಲಿ ಬ್ರೆಡ್ ಇದ್ದರೆ ರುಚಿಕರವಾದ ಬ್ರೆಡ್ ಸ್ಯಾಂಡ್ ವಿಚ್ ಮಾಡಿನೋಡಿ. ಮಕ್ಕಳು ಕೂಡ ಖುಷಿಯಿಂದ ಇದನ್ನು ಸವಿಯುತ್ತಾರೆ.
ತಾಯಿಯನ್ನು ಸೇರಲು ಮರಿಯಾನೆಗೆ ಬೆಂಗಾವಲಾದ ಅರಣ್ಯ ಇಲಾಖೆ ಸಿಬ್ಬಂದಿ: ಹೃದಯಸ್ಪರ್ಶಿ ವಿಡಿಯೋ ವೈರಲ್
ಬೇಕಾಗುವ ಸಾಮಾಗ್ರಿಗಳು:
ಬ್ರೆಡ್ ಪೀಸ್ – 6, ಎಣ್ಣೆ – 2 ಟೇಬಲ್ ಸ್ಪೂನ್, ಜೀರಿಗೆ – 1/2 ಟೀ ಸ್ಪೂನ್, ಪಾಲಕ್ ಎಲೆ – 2 ಕಪ್ ಕತ್ತರಿಸಿದ್ದು, ಸ್ವೀಟ್ ಕಾರ್ನ್ - 1/2 ಕಪ್, ಉಪ್ಪು – ರುಚಿಗೆ ತಕ್ಕಷ್ಟು, ಕಾಳುಮೆಣಸಿನ ಪುಡಿ – 1/2 ಟೀ ಸ್ಪೂನ್, ಮೈದಾ ಹಿಟ್ಟು – 1 ಟೇಬಲ್ ಸ್ಪೂನ್, ಹಾಲು – 1/2 ಕಪ್, ತುರಿದ ಚೀಸ್ – 1/4 ಕಪ್, ಬೆಣ್ಣೆ – ಸ್ವಲ್ಪ.
ಮಾಡುವ ವಿಧಾನ:
ಮೊದಲಿಗೆ ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದು ಬಿಸಿಯಾಗುತ್ತಲೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಜೀರಿಗೆ ಹಾಕಿ ಚಟಪಟ ಅನ್ನುವಾಗ ಪಾಲಕ್ ಸೊಪ್ಪು ಹಾಕಿ 2 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್
ನಂತರ 1 ಟೇಬಲ್ ಸ್ಪೂನ್ ಮೈದಾ ಹಿಟ್ಟು ಹಾಕಿ 2 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ½ ಕಪ್ ಹಾಲು ಸೇರಿಸಿ ಚೆನ್ನಾಗಿ ಕೈಯಾಡಿಸಿ. ನಂತರ ಉಪ್ಪು, ಕಾಳುಮೆಣಸಿನಪುಡಿ ಸೇರಿಸಿ 4 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಇದಕ್ಕೆ ತುರಿದ ಚೀಸ್ ಸೇರಿಸಿ ಮಿಕ್ಸ್ ಮಾಡಿಕೊಂಡು ಗ್ಯಾಸ್ ಆಫ್ ಮಾಡಿ.
ಬಳಿಕ ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದಕ್ಕೆ ಸ್ವಲ್ಪ ಬೆಣ್ಣೆ ಹಾಕಿಕೊಳ್ಳಿ. ಬ್ರೆಡ್ ಪೀಸ್ ನ ಒಂದು ಬದಿಗೆ ಮಾಡಿಟ್ಟುಕೊಂಡ ಮಿಶ್ರಣವನ್ನು ಸ್ವಲ್ಪ ಹಾಕಿ ಎಲ್ಲಾ ಕಡೆ ಹಚ್ಚಿಕೊಳ್ಳಿ. ನಂತರ ಇನ್ನೊಂದು ಬ್ರೆಡ್ ಪೀಸ್ ಅನ್ನು ಅದಕ್ಕೆ ಅಟ್ಟಿಸಿ ಬಿಸಿಯಾದ ತವಾದ ಮೇಲೆ ಇಟ್ಟು ಎರಡು ಕಡೆ ಕಂದುಬಣ್ಣ ಬರುವವರೆಗೆ ಹುರಿದುಕೊಳ್ಳಿ.