ಸ್ಪೈಸಿಯಾದ ರುಚಿಯಾದ ಶೇಂಗಾ ಬೀಜ ನಿಮ್ಮ ಸಂಜೆಯ ಚಹಾ/ ಕಾಫಿಯೊಂದಿಗೆ ಸಕ್ಕತ್ ಕಾಂಬಿನೇಶನ್ ಆಗಿರುತ್ತೆ. ಅದರಲ್ಲೂ ನಾಲಿಗೆಗೆ ರುಚಿ ಬೇಕಿದ್ದಲ್ಲಿ ಯಾವಾಗಲಾದರೂ ಒಮ್ಮೆ ಸವಿಯಬಹುದು.
ಬೇಕಾಗಿರುವ ಸಾಮಗ್ರಿಗಳು:
ಶೇಂಗಾ ಬೀಜಗಳು – 2 ಕಪ್, ¼ ಚಮಚ ಬೇಕಿಂಗ್ ಪೌಡರ್, ½ ಚಮಚ ಜೀರಿಗೆ ಪುಡಿ, 1 ½ ಚಮಚ ಚಾಟ್ ಮಸಾಲಾ, 3 ಕಪ್ ಕಡಲೆಹಿಟ್ಟು, ½ ಚಮಚ ಅರಿಶಿನ, 1 ಚಮಚ ಅಚ್ಚ ಖಾರದ ಪುಡಿ, ½ ಚಮಚ ಗರಂ ಮಸಾಲಾ ಪುಡಿ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಒಂದು ಬೌಲ್ ನಲ್ಲಿ ಕಡಲೆಹಿಟ್ಟನ್ನು ತೆಗೆದುಕೊಂಡು ಇದಕ್ಕೆ ಚಾಟ್ ಮಸಾಲಾ, ಗರಂ ಮಸಾಲಾ, ಜೀರಿಗೆ ಪುಡಿ, ಅಚ್ಚ ಖಾರದ ಪುಡಿ, ಬೇಕಿಂಗ್ ಪೌಡರ್, ಉಪ್ಪು ಮತ್ತು ಅರಿಶಿನ ಇಷ್ಟನ್ನು ಬೆರೆಸಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ಶೇಂಗಾ ಬೀಜ ಮತ್ತು 2 ಚಮಚ ಎಣ್ಣೆಯನ್ನು ಆ್ಯಡ್ ಮಾಡಿ.
ಪೇಸ್ಟ್ ತೆಳ್ಳಗಾಗದಂತೆ ನೀರನ್ನು ಬೆರೆಸಿಕೊಳ್ಳುತ್ತಾ ಕಲೆಸಿಕೊಳ್ಳಿ. ಈಗ ದಪ್ಪ ತಳದ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಶೇಂಗಾ ಬೀಜಗಳನ್ನು ಗೋಲ್ಡನ್ ಬ್ರೌನ್ ಬರುವವರೆಗೂ ಫ್ರೈ ಮಾಡಿ. ನಂತರ ಬಾಣಲೆಯಿಂದ ತೆಗೆದು, ಒಂದು ಟಿಶ್ಶ್ಯು ಪೇಪರ್ ಮೇಲೆ ಹಾಕಿ ಹೆಚ್ಚುವರಿ ಎಣ್ಣೆಯನ್ನು ತೆಗೆದುಬಿಡಿ. ನಂತರ ಅಚ್ಚ ಖಾರದ ಪುಡಿ ಮತ್ತು ಚಾಟ್ ಮಸಾಲಾವನ್ನು ಇದರ ಮೇಲೆ ಉದುರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ತಣ್ಣಗಾಗಲು ಬಿಟ್ಟು ನಂತರ ಚಹಾ/ ಕಾಫಿಯೊಂದಿಗೆ ಸವಿಯಿರಿ.