alex Certify ಸಂಜೆ ವ್ಯಾಯಾಮ ಮಾಡುವುದು ಎಷ್ಟು ಸರಿ…..? ಅದರಿಂದ ಆರೋಗ್ಯಕ್ಕೆ ಪ್ರಯೋಜನವಿದೆಯೇ ಅಥವಾ ಹಾನಿಯೇ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಜೆ ವ್ಯಾಯಾಮ ಮಾಡುವುದು ಎಷ್ಟು ಸರಿ…..? ಅದರಿಂದ ಆರೋಗ್ಯಕ್ಕೆ ಪ್ರಯೋಜನವಿದೆಯೇ ಅಥವಾ ಹಾನಿಯೇ…..?

ಪ್ರತಿದಿನ ಬೆಳಗ್ಗೆ ವ್ಯಾಯಾಮ ಮಾಡುವುದು ಉತ್ತಮ ಅಭ್ಯಾಸ. ಇದರಿಂದ ದಿನವಿಡೀ ನಾವು ಚಟುವಟಿಕೆಯಿಂದ ಇರಬಹುದು. ಸಾಮಾನ್ಯವಾಗಿ ಹೆಚ್ಚಿನ ಜನರು ವ್ಯಾಯಾಮ, ಬೆಳಗಿನ ನಡಿಗೆ ಮತ್ತು ಜಾಗಿಂಗ್ ಮೂಲಕ ದಿನವನ್ನು ಪ್ರಾರಂಭಿಸುತ್ತಾರೆ.

ಆದರೆ ಅನೇಕರಿಗೆ ಕೆಲಸದ ಒತ್ತಡದಿಂದಾಗಿ ಬೆಳಗ್ಗೆ ವರ್ಕೌಟ್ ಮಾಡಲು ಸಮಯವಿರುವುದಿಲ್ಲ. ಅಂಥವರು ಸಂಜೆ ಜಿಮ್‌ಗೆ ಹೋಗುತ್ತಾರೆ, ಇಲ್ಲವೇ ಯೋಗಾಸನ ಮಾಡುತ್ತಾರೆ. ಸಂಜೆ ವ್ಯಾಯಾಮ ಮಾಡುವುದು ಸರಿಯೋ ತಪ್ಪೋ? ಸಂಜೆ ಬೆವರುವಿಕೆಯಿಂದ ಆಗುವ ಪ್ರಯೋಜನಗಳೇನು ಅನ್ನೋದನ್ನು ನೋಡೋಣ.

ಉದ್ವೇಗದಿಂದ ಮುಕ್ತಿ

ನಮ್ಮಲ್ಲಿ ಅನೇಕರು ದಿನವಿಡೀ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಇದರಿಂದಾಗಿ ಸಾಕಷ್ಟು ಒತ್ತಡ ಮತ್ತು ಉದ್ವೇಗವನ್ನು ಎದುರಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಸಂಜೆಯ ಸಮಯದಲ್ಲಿ ವ್ಯಾಯಾಮ ಮಾಡುವುದು. ಇದು ಒತ್ತಡವನ್ನು ನಿವಾರಿಸುತ್ತದೆ. ನಿಮ್ಮ ಸಕಾರಾತ್ಮಕ ಶಕ್ತಿಯನ್ನು ವ್ಯಾಯಾಮಕ್ಕೆ ಖರ್ಚು ಖರ್ಚು ಮಾಡಿದರೆ ನಕಾರಾತ್ಮಕತೆಯು ಕಣ್ಮರೆಯಾಗುತ್ತದೆ.

ಕೋಪವನ್ನು ಹೊರಹಾಕುವುದು

ಎಲ್ಲಾ ದಿನಗಳು ಒಂದೇ ತೆರನಾಗಿ ಇರುವುದಿಲ್ಲ. ಶಾಲೆ, ಕಾಲೇಜು ಮತ್ತು ಕಚೇರಿಯಲ್ಲಿ ಜಗಳ ಮತ್ತು ವೈಮನಸ್ಸು ಉಂಟಾಗಬಹುದು. ಅಥವಾ ಬೇರೆ ಯಾವುದೇ ತೆರನಾದ ಸಮಸ್ಯೆಗಳಾಗಬಹುದು. ಇದರಿಂದ ನಾವು ತುಂಬಾ ಕೋಪಗೊಳ್ಳುತ್ತೇವೆ. ಹಾರ್ಮೋನ್‌  ಅಸಮತೋಲನ ಕೂಡ ಇದಕ್ಕೆ ಕಾರಣವಾಗಬಹುದು. ಸರಿಯಾದ ಸ್ಥಳದಲ್ಲಿ ನಮ್ಮ ಕೋಪವನ್ನು ಹೊರಹಾಕುವುದು ಮುಖ್ಯ. ಇದಕ್ಕಾಗಿ ನೀವು ಪಂಚಿಂಗ್ ಬ್ಯಾಗ್ ಬಳಸಬಹುದು. ಬಾಕ್ಸಿಂಗ್‌ ವ್ಯಾಯಾಮ ಮಾಡುವ ಮೂಲಕ ನಿಮ್ಮಲ್ಲಿರುವ ಕ್ರೋಧವನ್ನು ಹೊರಹಾಕಬಹುದು.

ದೇಹದ ನೋವು ದೂರವಾಗುತ್ತದೆ

ದಿನವಿಡೀ ಕೆಲಸ, ಟೆನ್ಷನ್‌ನಿಂದಾಗಿ ದೇಹವು ಆಗಾಗ ತೀವ್ರವಾದ ನೋವು ಅಥವಾ ಆಯಾಸವನ್ನು ಅನುಭವಿಸುತ್ತದೆ. ನಮ್ಮ ಮನಸ್ಸು ಕೂಡ ಸಂಪೂರ್ಣವಾಗಿ ದಣಿದಿರುತ್ತದೆ. ಹಾಗಾಗಿ ಸಂಜೆ ವ್ಯಾಯಾಮ ಮಾಡುವುದರಿಂದ ಒತ್ತಡ ನಿವಾರಣೆಯಾಗಿ ಚೆನ್ನಾಗಿ ನಿದ್ದೆ ಬರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...