ಪ್ರತಿ ಕೆಲಸಕ್ಕೂ ಒಂದು ಸಮಯವಿದೆ. ಅದರಲ್ಲೂ ಕೆಲವೊಂದು ಕೆಲಸವನ್ನು ಯಾವುದೇ ಕಾರಣಕ್ಕೂ ಸಂಜೆ ಮಾಡಬಾರದು. ಹಾಗೆ ಮಾಡಿದ್ರೆ ಲಕ್ಷ್ಮಿ ಜೊತೆಗೆ ಎಲ್ಲ ದೇವಾನುದೇವತೆಗಳು ಮನೆ ತೊರೆದು ಹೋಗುತ್ತವೆ ಎಂದು ಶಾಸ್ತ್ರ ಹೇಳುತ್ತದೆ.
ಶಾಸ್ತ್ರದ ಪ್ರಕಾರ ಯಾವ ಕೆಲಸವನ್ನು ಸಂಜೆ ಮಾಡಬಾರದು ಎಂಬುವುದನ್ನು ನೋಡುವುದಾದರೆ,
ಸಂಜೆ ತುಳಸಿ ಗಿಡಕ್ಕೆ ನೀರು ಹಾಕಬಾರದು. ಹಾಗೆ ಅದರ ಎಲೆಗಳನ್ನು ಕೀಳಬಾರದು. ಬದಲಾಗಿ ತುಳಸಿ ಗಿಡದ ಬಳಿ ದೀಪ ಬೆಳಗಬೇಕು.
ಸಂಜೆ ಹೊತ್ತಲ್ಲಿ ಮನೆಯನ್ನು ಸ್ವಚ್ಛಗೊಳಿಸಬಾರದು. ಕಸಬರಿಗೆ ಉಪಯೋಗಿಸಿದರೆ, ಸಕಾರಾತ್ಮಕ ಅಂಶ ಮನೆಯಿಂದ ಹೊರ ಹೋಗುತ್ತದೆ. ನಕಾರಾತ್ಮಕ ಅಂಶ ಮಾತ್ರ ಉಳಿದುಬಿಡುತ್ತದೆ.
ಬೇರೆಯವರನ್ನು ನಿಂದಿಸುವುದು, ಕೆಟ್ಟ ಪದ ಉಪಯೋಗಿಸಿ ಬೈಯುವುದು ಮಾಡಬಾರದು. ಅದರಲ್ಲೂ ಸಂಜೆ ಸಮಯದಲ್ಲಿ ಇದರಿಂದ ದೂರ ಇರುವುದು ಒಳ್ಳೆಯದು.
ಸಂಜೆ ಸಮಯದಲ್ಲಿ ಮನೆಯ ವಾತಾವರಣವನ್ನು ಪವಿತ್ರವಾಗಿರಿಸಿ. ಶಾರೀರಿಕ ಸಂಬಂಧ ಬೆಳೆಸಬಾರದು.
ಓದಲು ಬೆಳಗಿನ ಸಮಯ ಬಹಳ ಉಪಯುಕ್ತ. ಹಾಗೆ ಸಂಜೆ ಸಮಯದಲ್ಲಿ ಅಧ್ಯಯನ ಮಾಡಬಾರದು ಎನ್ನುತ್ತದೆ ಶಾಸ್ತ್ರ.
ಸಂಜೆ ವೇಳೆ ಯಾವುದೇ ಆಹಾರ ಸೇವಿಸಬಾರದು.